ಖರ್ಜಿ ಕಾಯಿ

0
284

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
1 ಕಪ್ ತೆಂಗಿನ ತುರಿ, 1/2 ಕಪ್ ಬೆಲ್ಲ, 1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಏಲಕ್ಕಿ ಪುಡಿ, 2 ಚಮಚ ತುಪ್ಪ, ಕರಿಯಲು ಎಣ್ಣೆ, ಉಪ್ಪು.
 
ತಯಾರಿಸುವ ವಿಧಾನ:
ತೆಂಗಿನ ತುರಿ, ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಕುದಿಸಿ ಹೂರಣ ತಯಾರಿಸಿಟ್ಟುಕೊಳ್ಳಿ. ಮೈದಾ ಮತ್ತು ರವೆಯನ್ನು ಸ್ವಲ್ಪ ತುಪ್ಪ ಮತ್ತು ಉಪ್ಪು ಹಾಕಿ ಕಲಸಿ ಎರಡು ತಾಸು ಹಾಗೇ ಬಿಡಿ. ನಂತರ ಪೂರಿಯಂತೆ ಲಟ್ಟಿಸಿ ಒಳಗೆ ಹೂರಣವನ್ನಿಟ್ಟು ಮಡಚಿ ಸುತ್ತಲೂ ಸೇರಿಸಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವ ಹಾಗೆ ಕರಿಯಿರಿ.

LEAVE A REPLY

Please enter your comment!
Please enter your name here