ಖನಿಜ ಪತ್ತೆಗಾಗಿ ಹೊಸ ನೌಕೆ

0
217

ರಾಷ್ಟ್ರೀಯ ಪ್ರತಿನಿಧಿ ವರದಿ
ಸಾಗರ ತಳದಲ್ಲಿರುವ ಖನಿಜ ಪತ್ತೆ ಮಾಡುವುದಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ(ಜೆಎಸ್ಐ)ಸಾಗರದಳದಲ್ಲಿ ಹೊಂಡ ಕೊರೆಯುವ ಹೊಸ ಭೂತಾಂತ್ರಿಕ ನೌಕೆ ಖರೀದಿಸಲು ಮುಂದಾಗಿದೆ.
 
 
ಈ ವಿಶೇಷ ನೌಕೆಗೆ ಕೇಂದ್ರ ಸರ್ಕಾರ ಬೇಡಿಕೆಯನ್ನು ಅನುಮೋದಿಸಿದ್ದು, ಟೆಂಡರ್ ಹಂತದಲ್ಲಿದೆ. ಇನ್ನೊಂದು ವರ್ಷದಲ್ಲಿ ಈ ನೌಕೆ ಸಂಶೋಧನೆಗೆ ಸಹಕರಿಸಲಿದೆ.
 
 
200ಕೋಟಿ ರೂ.ಮೊತ್ತದ ಈವಿಶೇಷ ನೌಕೆ ಸಮುದ್ರದಾಳದಲ್ಲಿ 30 ಮೀಟರ್ ಹೊಂಡ ಕೊರೆದು ಅಲ್ಲಿರುವ ಖನಿಜ ಪತ್ತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು 60 ಮೀಟರ್ ಅಳವಿರುವ ಸಮುದ್ರದಲ್ಲಿ ಚಟುವಟಿಕೆ ಕೈಗೊಳ್ಳುತ್ತದೆ.
 
 
ಈಗಾಗಲೇ 2013ರಲ್ಲಿ ಸೇವೆಗೆ ಸೇರ್ಪಡೆಗೊಂಡ ‘ಸಮುದ್ರ ರತ್ನಾಕರ್’ ನೌಕೆ ಅತ್ಯಾಧುನಿಕ ಸರ್ವೇಕ್ಷಣೆ, ಸಮೀಕ್ಷೆ, ಸಂಶೋಧನೆಗೆ ಬಳಸಲಾಗುತ್ತದೆ. ಇದರೊಂದಿಗೆ ಸಮುದ್ರ ಕೌಸ್ತುಭ, ಸಮುದ್ರ ಶೋಧಿಕಾಮ ಎಂಬ ಕರಾವಳಿ ಸಮೀಕ್ಷಾ ಹಡಗುಗಳೂ ಸೇವೆಯಲ್ಲಿದೆ. ಇದಕ್ಕೆ ಮೊದಲು ಸೇವೆಯಲ್ಲಿದ್ದ ‘ಸಮುದ್ರ ಮಥನ’ ಎಂಬ ನೌಕೆ ಇತ್ತೀಚೆಗೆ ನಿವೃತ್ತಿ ಹೊಂದಿದೆ.

LEAVE A REPLY

Please enter your comment!
Please enter your name here