ಖಂಡನೆ

0
253

 
ನಮ್ಮ ಪ್ರತಿನಿಧಿ ವರದಿ
ರಾಜ್ಯ ಸರಕಾರಿ ನೌಕರರ ಮತ್ತು ಪೋಲಿಸರ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸಿ, ಪರಿಹರಿಸಿಕೊಳ್ಳಬೇಕಾಗಿದ್ದ ರಾಜ್ಯ ಸರಕಾರ ನೌಕರರ ಮತ್ತು ಪೋಲಿಸರ ಪ್ರತಿಭಟನೆಯ ಧ್ವನಿಯನ್ನೇ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.
 
 
 
ರಾಜ್ಯ ಪೋಲಿಸರು ಸಮಯದ ನಿರ್ಬಂಧವಿಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರಕಾರ ಮಾತುಕತೆ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮುಂದಾಗಬೇಕಾಗಿತ್ತು. ಆದರೆ ‘ಎಸ್ಮಾ’ ದಂತಹ ಅಸ್ತ್ರವನ್ನು ಬಳಸುವ ಬೆದರಿಕೆ ಒಡ್ಡಿ, ಆರಕ್ಷಕರು ಪ್ರತಿಭಟನೆ ನಡೆಸುವಂತಿಲ್ಲ ಎನ್ನುತ್ತಿರುವುದು ಪೋಲಿಸರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ದಬ್ಬಾಲಿಕೆ ಎಂದು ಅವರು ಟೀಕಿಸಿದ್ದಾರೆ.
 
 
 
ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ಈ ರೀತಿ ಬೆದರಿಕೆ ಒಡ್ಡುವ ಬದಲು ಸಂಧಾನ ಅಥವಾ ಕೆಲವಾರು ಬೇಡಿಕೆಗಳನ್ನಾದರೂ ಈಡೇರಿಸುವ ಮೂಲಕ ಪ್ರತಿಭಟನೆಯನ್ನು ತಡೆಯಬಹುದಾಗಿತ್ತು ಎಂದವರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here