ಕ್ಸಿ ಜಿನ್‌ಪಿಂಗ್‌ ಮನವೊಲಿಕೆ ಯತ್ನ

0
325

ವರದಿ: ಲೇಖಾ
ಪರಮಾಣು ಸರಬರಾಜುದಾರರ ಸಮೂಹ (ಎನ್‌ಎಸ್‌ಜಿ) ಸೇರುವ ಭಾರತದ ಯತ್ನಕ್ಕೆ ಭಾರಿ ಪ್ರತಿರೋಧ ತೋರುತ್ತಿರುವ ಚೀನಾದ ಮನವೊಲಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸಿದ್ದಾರೆ.
 
 
ಉಜ್ಬೇಕಿಸ್ತಾನ ರಾಜಧಾನಿ ತಾಷ್ಕೆಂಟ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಅವರು, ಇದೇ ಸಮಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜತೆ ಮಹತ್ವದ ಮಾತುಕತೆ ನಡೆಸಿದರು.
 
 
 
ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ ಪ್ರಧಾನಿ ಮೋದಿ, ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಭಾರತ ಯತ್ನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಎನ್‌ಎಸ್‌ಜಿಗೆ ಭಾರತ ಸಲ್ಲಿಸಿರುವ ಅರ್ಜಿಯನ್ನು ಪಾರದರ್ಶಕ ಹಾಗೂ ವಸ್ತುನಿಷ್ಠವಾಗಿ ಪರಿಶೀಲಿಸಿ ಎಂದು ಕೋರಿದರು.
 
 
 
ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ನೀಡಿಕೆ ಬಗ್ಗೆ ಚೀನಾ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ಮಾಡಬೇಕು. ಮೆರಿಟ್ ಹಾಗೂ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಭಾರತದ ಬದ್ಧತೆಯನ್ನು ಪರಿಗಣಿಸಿ ಬೆಂಬಲ ನೀಡಬೇಕು ಎಂದರು.
 
 
 
ಸಿಯೋಲ್ ಸಭೆಯಲ್ಲಿ ಭಾರತದ ಪರ ಹೆಚ್ಚಿನ ರಾಷ್ಟ್ರಗಳು ಒಲವು ಹೊಂದಿದ್ದು, ಚೀನಾ ಕೂಡ ಸಹಕಾರ ನೀಡಬೇಕು ಎಂದು ಪ್ರಧಾನಿ ಮೋದಿ, ಕ್ಸಿ ಜಿನ್ ​ಪಿಂಗ್​ರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here