ಕ್ಷಯರೋಗ ಅರಿವು ಕಾರ್ಯಕ್ರಮ

0
434

 
ಮಂಗಳೂರು ಪ್ರತಿನಿಧಿ ವರದಿ
ಜೂನ್ 26 ರಂದು ಜಿಲ್ಲಾ ಕ್ಷಯರೋಗ ಚಿಕಿತ್ಸಾ ಕೇಂದ್ರ, ದ.ಕ ಮತ್ತು ಬಾಬುಜಗಜೀವನ್ ರಾಮ್ ಸೇವಾ ಸಂಘ ಇವರ ಸಹಯೋಗದೊಂದಿಗೆ ಕ್ಷಯರೋಗದ ಕುರಿತು ಅರಿವು ಕಾರ್ಯಕ್ರಮವನ್ನು ಮಂಗಳೂರು ತಾಲೂಕಿನ ಕೋಡಿಕಲ್ನ ಬಾಬೂಜಿ ನಗರದಲ್ಲಿ ನಡೆಸಲಾಯಿತು.
 
 
 
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಸದಾನಂದ ಬಿ. ಇವರು ಕ್ಷಯರೋಗವು ಒಂದು ಸಾಂಕ್ರಮಿಕ ಖಾಯಿಲೆಯಾಗಿದೆ, ಈ ಖಾಯಿಲೆಯು ಮೈಕೋ ಬ್ಯಾಕ್ಟೋರಿಯಮ್ ಟ್ಯುಬರ್ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಬರುತ್ತದೆ. ಖಾಯಿಲೆ ಇರುವ ವ್ಯಕ್ತಿಯು ಕೆಮ್ಮುವಾಗ, ಸೀನಿದಾಗ ಮಾತನಾಡುವಾಗ ಇತರರಿಗೆ ಗಾಳಿಯ ಮೂಲಕ ಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಇರುವುದು, ಸಂಜೆ ವೇಳೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು ಮತ್ತು ಕಫದಲ್ಲಿ ರಕ್ತ ಬರುವುದು ಇವೆಲ್ಲ ಈ ಖಾಯಿಲೆಯ ಲಕ್ಷಣಗಳೆಂದು ತಿಳಿಸಿದರು.
 
 
ಈ ಕಾರ್ಯಕ್ರಮದಲ್ಲಿ ಬಾಬುಜಗಜೀವನ್ ರಾಮ್ ಸೇವಾಸಂಘದ ಉಪಕಾರ್ಯದರ್ಶಿಯಾದ ವನಿತಾ ಮತ್ತು ಸಮಿತಿ ಸದಸ್ಯರಾದ ಶಿವನಂದ್ ರವರು ಭಾಗವಹಿಸಿದರು. ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರದ ಪಿ.ಪಿ.ಎಂ ಕೋರ್ಡಿನೇಟರ್ ಆದ ಮನೋಜ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here