ಕ್ಷಮೆ ಕೇಳಲು ನಿರಾಕರಿಸಿದ ಮಾಜಿ ಸಂಸದೆ

0
266

ಬೆಂಗಳೂರು ಪ್ರತಿನಿಧಿ ವರದಿ
ಪಾಕ್ ಬಗ್ಗೆ ಹೇಳಿಕೆಗೆ ಕ್ಷಮೆ ಕೇಳುವ ಅಗತ್ಯವಿಲ್ಲ. ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ. ಮಾಧ‍್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೆ ಅಷ್ಟೆ ಎಂದು ಮಾಜಿ ಸಂಸದೆ, ನಟಿ ರಮ್ಯಾ ಹೇಳಿದ್ದಾರೆ.
 
 
 
ಪಾಕಿಸ್ತಾನದ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ರಮ್ಯ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಎಲ್ಲರೂ ಒಂದೇ ಸಿದ್ಧಾಂತಕ್ಕೆ ಅನುಗುಣವಾಗಿ ಇರಬೇಕಿಲ್ಲ. ಪಾಕ್ ಬಗ್ಗೆ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಪಾಕಿಸ್ತಾನದ ಬಗ್ಗೆ ನನ್ನ ಅನುಭವಗಳನ್ನು ಹಂಚಿಕೊಂಡೆ. ದೇಶದ್ರೋಹ ಕಾಯ್ದೆ ದುರುಪಯೋಗವಾಗುತ್ತಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here