ಕ್ಲೈಮ್ಯಾಕ್ಸ್ ಗೆ ಬಲಿಯಾದ ಅನಿಲ್ ಮತ್ತು ಉದಯ್

0
477

 
ಬೆಂಗಳೂರು ಪ್ರತಿನಿಧಿ ವರದಿupdate
mastigudi_death-_vaarte
 

  • ಮಾಸ್ತಿ ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಹೆಲಿಕಾಪ್ಟರ್ ನಿಂದ ಕೆಳಗೆ ಬಿದ್ದ ಇಬ್ಬರು ಕಲಾವಿದರು ದುರ್ಮರಣ ಹೊಂದಿದ್ದಾರೆ ಎಂದು ತಾವರೆಕೆರೆ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ತಿಳಿಸಿದ್ದಾರೆ. ನಟ ವಿಜಯ್, ಸಹಕಲಾವಿದರಾದ ಅನಿಲ್ ಮತ್ತು ಉದಯ್ ಮಧ್ಯಾಹ್ನ 2.48ಕ್ಕೆ ನೀರಿಗೆ ಹಾರಿದ್ದರು. ಇವರಲ್ಲಿ ವಿಜಯ್ ಈಜಿ ದಡ ಸೇರಿದರೆ, ಉಳಿದಿಬ್ಬರು ನೀರಿನಲ್ಲೇ ಕಣ್ಮರೆಯಾಗಿದ್ದಾರೆ. ಹೆಲಿಕಾಪ್ಟರ್ ನಿಂದ ನೀರಿಗೆ ಬೀಳುವ ದೃಶ್ಯದ ಚಿತ್ರೀಕರಣದ ವೇಳೆ ಈ ಅನಾಹುತ ನಡೆದಿದೆ.
 
ಶೂಟಿಂಗ್ ವೇಳೆ ಅನಾಹುತ
 
ಶೂಟಿಂಗ್ ವೇಳೆ ಭೀಕರ ಅನಾಹುತ ನಡೆದಿದೆ. ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಇಬ್ಬರು ಕಲಾವಿದರು ಮೇಲೆ ಬಾರದ  ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ್ದ ಮೂವರ ಪೈಕಿ ಇಬ್ಬರು ಇನ್ನೂ ಮೇಲಕ್ಕೆ ಬಾರಲಿಲ್ಲ.
 
 
‘ಮಾಸ್ತಿಗುಡಿ’ಚಿತ್ರಕ್ಕಾಗಿ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ್ದರು. ನಟ ದುನಿಯಾ ವಿಜಯ್, ಖಳನಟರಾದ ಅನಿಲ್, ಉದಯ್ ಎಂಬುವವರು ಕೆರೆಗೆ ಹಾರಿದ್ದರು. ಆದರೆ ಅನಿಲ್ ಮತ್ತು ಉದಯ್ ಇನ್ನೂ ನೀರಿನಿಂದ ಮೇಲಕ್ಕೆ ಬರಲಿಲ್ಲ. ಕೆರೆಗೆ ಬಿದ್ದ ನಟ ದುನಿಯಾ ವಿಜಿ  ಈಜಿ ದಡ ಸೇರಿದ್ದಾರೆ
 
 
ಈಗ ಖಳನಟರಾದ ಅನಿಲ್, ಉದಯ್ ಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶೋಧ ಕಾರ್ಯಕ್ಕಾಗಿ 4 ಅಗ್ನಿಶಾಮಕ ದಳ ವಾಹನ ದೌಡಾಯಿಸಿದೆ.

LEAVE A REPLY

Please enter your comment!
Please enter your name here