'ಕ್ಲಿಕ್' 'CLICK'

0
1295

ವಿಶೇಷ ಲೇಖನ
ಛಾಯಾಗ್ರಹಣ ಎಂಬುದು ಒಂದು ತಂತ್ರಜ್ಞಾನ, ಒಂದು ಕಲೆ. ಈ ಅದ್ಭುತ ಶಕ್ತಿಗೆ 177ವರ್ಷ . ಇಂದು ವಿಶ್ವ ಛಾಯಾಗ್ರಹಣ ದಿನ. ಕರಾವಳಿಯ ಆಯ್ದ ಯುವ ಛಾಯಾಗ್ರಾಹಕರ ಛಾಯಾಚಿತ್ರಗಳು ವಾರ್ತೆ.ಕಾಂನ ಓದುಗರಿಗಾಗಿ ನಾವು ನೀಡುತ್ತಿದ್ದೇವೆ. ಛಾಯಾಚಿತ್ರಗಳ ನೈಜ ಸವಿಯನ್ನು ಸವಿದು ಅಭಿನಂದಿಸುವ ಮೂಲಕ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ… ಎಲ್ಲಾ ಛಾಯಾಗ್ರಾಹಕರಿಗೂ ಟೀಂ ವಾರ್ತೆಯ ಪರವಾಗಿ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು.
 
 
ಮಹೇಶ್ ಕೃಷ್ಣ ತೇಜಸ್ವಿ
ಮಹೇಶ್ ತೇಜಸ್ವಿ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್. ಯುವ ಛಾಯಾಗ್ರಾಹಕ. ಮಾಧ್ಯಮ ಅನುಭವವೂ ಸಾಕಷ್ಟಿದೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಸೆರೆಹಿಡಿಯವ ಕೈಚಳಕ. ವರ್ಣಮಯ ಛಾಯಾಚಿತ್ರ. ಮನಕ್ಕೆ ಮುದನೀಡುವ ಇವರ ಪ್ರತಿಯೊಂದು ಛಾಯಾಚಿತ್ರವೂ ಮನೋಜ್ಞ. ಈ ಶುಭದಿನ ಇವರಿಗೊಂದು ಗುಡ್ ಲಕ್.
tejasvi_vaarte
 
ಮಂಜುನಾಥ್ ಭಟ್
ಮಂಜುನಾಥ್ ಭಟ್ ಚುರುಕು ಬುದ್ದಿಮತ್ತೆ. ಮಾಧ್ಯಮದಲ್ಲಿ ಕೆಲಸ , ಹೊಸತನ ಹುಡುಕುವ ಹಂಬಲ. ಸರಳ ಜೀವಿ. ಸ್ನೇಹಮಯಿ ಹುಡುಗ. ಇವರ ಪ್ರತಿ `ಕ್ಲಿಕ್’ ವಿಭಿನ್ನ. ಪರಿಸರವನ್ನು ವಿಭಿನ್ನವಾಗಿ ಇವರು ಕಾಣುತ್ತಾರೆ. ಎನೀವೇ ಈ ಶುಭಾವಸರದಲ್ಲಿ ಅವರಿಗೊಂದು ಗುಡ್ ಲಕ್.
 
manjunath_vaarte
ಶೇಣಿ ಮುರಳಿ
ಮಾಧ್ಯಮದ ವಿವಿಧ ಮಜಲುಗಳಲ್ಲಿ ಕೆಲಸಮಾಡಿ ಛಾಯಾಗ್ರಹಣದತ್ತ ಸಹಜ ಆಸಕ್ತಿ ಹೊಂದಿದ ಉತ್ಸಾಹೀ ಯುವಕ. ಕಪ್ಪು ಬಿಳುಪು ಛಾಯಾಗ್ರಹಣದ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡುವ ಛಲ ಹೊಂದಿ ಹಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಜನಮನಗೆಲ್ಲುವ ಇವರ ಚಿತ್ರಗಳು ಬದುಕಿನ ಆಗು ಹೋಗುಗಳತ್ತ ದೃಷ್ಠಿ ನೆಟ್ಟಿವೆ. ಇವರಿಗೂ ಈ ದಿನದ ಶುಭಾಶಯಗಳು.
 
murali _vaarte
ದೀಪ್ತಿ ಮುರಳಿ
ಮನದಲ್ಲಿ ಸುಪ್ತವಾಗಿದ್ದ ಚಿಂತನೆಗಳನ್ನು ಕ್ಯಾಮರಾ ಲೆನ್ಸ್ ಮೂಲಕ ಕ್ಲಿಕ್ಕಿಸುವ ದೀಪ್ತಿ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಸುಂದರವಾಗಿ ಕ್ಲಿಕ್ಕಿಸುತ್ತಾರೆ. ಫೋಟೋಗ್ರಾಫಿಯನ್ನೊಂದು ಹವ್ಯಾಸವಾಗಿ ರೂಢಿಸಿ ಕನಿಷ್ಠ ಅವಧಿಯಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿದು ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಚಿತ್ರಗಳು ಬೆಳಕು ಕಾಣುತ್ತಿವೆ. ಇವರಿಗೂ ಶುಭಾಶಯಗಳು.
 
deepthi_vaarte
ಅನಿತ್ ಕುಮಾರ್
ಟಿ.ವಿ ಮಾಧ್ಯಮದ ಕ್ಯಾಮರಾ ಮೆನ್ ಆಗಿದ್ದು ಸಹಜವಾಗಿಯೇ ಕ್ಯಾಮೆರಾ ಹುಚ್ಚು ಹಚ್ಚಿಸಿಕೊಂಡವರು. ಎಳವೆಯಲ್ಲಿಯೇ ಛಾಯಾಗ್ರಹಣದತ್ತ ಆಸಕ್ತಿ ಹೊಂದಿದ ಅನಿತ್ ಗೆ ನೇಚರ್ ಫೋಟೋ ಗ್ರಾಫಿಯದ್ದೇ ಹುಚ್ಚು. ಇವರ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅವರಿಗೊಂದು ಗುಡ್ ಲಕ್.
anith _vaarte

LEAVE A REPLY

Please enter your comment!
Please enter your name here