ಕ್ಲಬ್ಬಿನ ವಾರ್ಷಿಕೋತ್ಸವ ಸಂಪನ್ನ

0
368

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಉದಯಗಿರಿ-ಬಾಂಜತ್ತಡ್ಕ ಭಗತ್ ಸಿಂಗ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ಬಿನ ವಾರ್ಷಿಕೋತ್ಸವ ಹಾಗೂ 16ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ವಿಶ್ವನಾಥ ಪ್ರಭು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಹಾಭಾರತದಲ್ಲಿ ಶ್ರೀಕೃಷ್ಣ ಪಾತ್ರದ ಬಗ್ಗೆ ವಿವರಣೆಯನ್ನು ನೀಡಿದರು. ಇಂತಹ ಸಂಘಟನೆಗಳು ಹೀಗಿರುವ ಕಾರ್ಯಕ್ರಮಗಳನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
 
 
ಮುಖ್ಯ ಅತಿಥಿಗಳಾಗಿ ಆಗಮಿಸಿದ ನೋಟರಿ ಅಡ್ವ. ವೆಂಕಟ್ರಮಣ ಭಟ್ ಮಾತನಾಡಿ ಅಷ್ಟಮಿ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡಿಸುವುದರಿಂದ ಮಕ್ಕಳಿಗೆ ಹೊಸ ಹುರುಪು ಸಿಗುತ್ತದೆ, ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿ ಎಂದು ಕರೆ ನೀಡಿದರು.
 
 
ಇದೇ ಸಂದರ್ಭದಲ್ಲಿ ಕೊರಗ ತನಿಯ ದೈವದ ಕರ್ಮಿ, ಊರಿನ ಹಿರಿಯ ವ್ಯಕ್ತಿ ಸಂಕ್ರಾಂತಿ ಕೈಲಂಕಜೆ ಅವರನ್ನು ಕ್ಲಬ್ಬಿನ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಂಕರ ಬಾರಡ್ಕ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ಉದಯಗಿರಿ ಶಾಲಾ ಅಧ್ಯಾಪಕ ರಾಜೇಶ್ ಮಾಸ್ಟರ್, ಅಧ್ಯಾಪಿಕೆ ಸವಿತಾ ಶುಭಾಶಂಸನೆಗೈದರು. ಸಂಘದ ಅಧ್ಯಕ್ಷ ಸೀತಾರಾಮ ಬಾಂಜತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಕುಮಾರ್ ಧನ್ಯವಾದವನ್ನಿತ್ತರು. ಜೊತೆ ಕಾರ್ಯದರ್ಶಿ ಉದಯ, ರವಿ ಕೈಲಂಕಜೆ, ರಜನಿ ಸನ್ ಲೈಟ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here