ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

0
242

ವರದಿ:ಲೇಖಾ
ಆಗಸ್ಟ್ 5ರಿಂದ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಕ್ರಿಡಾಪಟುಗಳ ಜತೆ ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.
 
 
ನವದೆಹಲಿಯ ಮಾಣಿಕ್​ಷಾ ಸೆಂಟರ್​ನಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. ಸಭೆಯಲ್ಲಿ 13 ವಿವಿಧ ಕ್ರೀಡಾ ವಿಭಾಗಗಳಲ್ಲಿ ರಿಯೋ ಒಲಿಂಪಿಕ್ಸ್​ಗೆ ಆಯ್ಕೆಯಾಗಿರುವ ಸುಮಾರು 100 ಕ್ರೀಡಾ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
 
 
ಪ್ರಧಾನಿ ಮೋದಿ ಅವರು ಕ್ರೀಡಾಪಟುಗಳೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಲಿದ್ದು, ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಕೋರಲಿದ್ದಾರೆ.

LEAVE A REPLY

Please enter your comment!
Please enter your name here