ಕ್ರೀಡಾಪಟುಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಿ – ಶ್ರೀಪತಿ ಭಟ್

0
292
ಕ್ರೀಡಾಕೂಟವನ್ನು ಉದ್ಘಾಟಿಸುತ್ತಿರುವ ಉದ್ಯಮಿ ಶ್ರೀಪತಿ ಭಟ್

ಜಿಲ್ಲಾಮಟ್ಟದ ವಾಲೀಬಾಲ್ ಪಂದ್ಯಾಟ ಉದ್ಘಾಟಿಸಿದ ಶ್ರೀಪತಿ ಭಟ್
ಮೂಡಬಿದಿರೆ ಪ್ರತಿನಿಧಿ ವರದಿ
ಕ್ರೀಡಾಪಟುಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ವ್ಯಕ್ತಿತ್ವ ನಿರ್ಮಾಣದದೊಂದಿಗೆ ಕ್ರೀಡಾಸ್ಫೂರ್ತಿಯನ್ನು ಮೈಗೂಢಿಸಿಕೊಳ್ಳಬೇಕು ಎಂದು ಉದ್ಯಮಿ ಶ್ರೀಪತಿ ಭಟ್ ಹೇಳಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ರೋಟರಿ ಪದವಿಪೂರ್ವ ಕಾಲೇಜು ಮೂಡಬಿದಿರೆ ಇದರ ಸಹಯೋಗದೊಂದಿಗೆ ಪದವಿಪೂರ್ವ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ದ.ಕ.ಜಿಲ್ಲಾಮಟ್ಟದ ವಾಲೀಬಾಲ್ ಪಂದ್ಯಾಟ 2016-17ನ್ನು ಮೂಡಬಿದಿರೆ ರೋಟರಿ ಆಂಗ್ಲಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳು ಫಲಕದ ಆಸೆಯನ್ನು ಇರಿಸಿಕೊಳ್ಳಬಾರದು; ಬದಲಾಗಿ ಭಾಗವಹಿಸುವಿಕೆಯೆಂಬುದು ಮುಖ್ಯ ಎಂದವರು ಹೇಳಿದರು.

ಹಿರಿಯ ಕ್ರೀಡಾಪಟು ಪ್ರೇಮನಾಥ್ ಶೆಟ್ಟಿ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಹಿರಿಯ ಕ್ರೀಡಾಪಟು ಪ್ರೇಮನಾಥ್ ಶೆಟ್ಟಿ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಹಿರಿಯ ಕ್ರೀಡಾಪಟು , ದೈಹಿಕ ನಿರ್ದೇಶಕ ಪ್ರೇಮನಾಥ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಫಲಕ ಅನಾವರಣಮಾಡಿದರು. ವೇದಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾನಿರ್ದೇಶಕ ಶಶಿಧರ್ ಮಾಣಿ , ರೋಟರಿಶಾಲೆಯ ಆಡಳಿತ ಅಧಿಕಾರಿ ಶುಭಕರ ಅಂಚನ್, ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ಸದಾನಂದ ಶೆಟ್ಟಿ, ರೋಟರಿ ಶಾಲೆಯ ದೈಹಿಕ ನಿರ್ದೇಶಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.
ರೋಟರಿ ಶಾಲಾ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ ಸ್ವಾಗತಿಸಿದರು. ಸತೀಶ್ಚಂದ್ರ ಚಿತ್ರಾಪು ಕಾರ್ಯಕ್ರಮ ನಿರ್ವಹಿಸಿದರು, ಉಪನ್ಯಾಸಕ ಗಜಾನನ ವಂದಿಸಿದರು.
 

LEAVE A REPLY

Please enter your comment!
Please enter your name here