ಕ್ಯಾಶ್ ಲೆಸ್ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮ

0
297

ಉಜಿರೆ ಪ್ರತಿನಿಧಿ ವರದಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನ ಎ.ಕಾಂ ವಿದ್ಯಾರ್ಥಿಗಳಿಂದ ಕ್ಯಾಶ್ ಲೆಸ್ ವ್ಯವಹಾರಗಳ ಕರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಕ್ರಮ ಇತ್ತೀಚೆಗೆ ಮುಂಡಾಜೆಯಲ್ಲಿ ನಡೆಯಿತು.
 
 
 
ಕ್ಯಾಶ್ ಕೆಸ್ ವ್ಯವಹಾರಗಳ ಬಗ್ಗೆ ಹಳ್ಳಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿ ಕೊಂಡ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೋ. ಸುರೇಶ್ ಬಾಬು ಮಾತನಾಡಿ ಕ್ಯಾಶ್ ಲೆಸ್ ಬಗ್ಗೆ ಹಳ್ಳಿ ಜನರಲ್ಲಿರುವ ಗೊಂದಲ ನಿವಾರಿಸಲು ವಿವಿಧ ಪ್ರಾತ್ಯಕ್ಷಿತೆ ಹಾಗೂ ಮಾಹಿತಿ ನೀಡುವ ಮೂಲಕ ಅವರನ್ನು ಜಾಗೃತಿಗೊಳಿಸಿ ನಗದು ರಹಿತ ವ್ಯವಹಾರಗಳನ್ನು ಮಾಡಲು ಪ್ರೇರೇಪಿಸಲಾಗವುದು. ಅಲ್ಲದೆ ಅಪಪ್ರಚಾರಗಳಿಂದ ಹಳ್ಳಿ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
 
 
ಗ್ರಾಮದ ಸುಮಾರು 50 ಮನೆ, ವಿವಿಧ ಸಂಘ ಸಂಸ್ಥೆ, ಅಂಗಡಿ, ಸ್ವ-ಸಹಾಯ ಗುಂಪುಗಳಿಗೆ ಭೇಟಿ ನೀಡಿದ ತಂಡ ವಿವಿಧ ಪ್ರಾತ್ಯಕ್ಷಿತೆ ಮೂಲಕ ಜನರಲ್ಲಿ ಅರಿವು ಮೂಡಿಸಿದರು.ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಪ್ರೋ. ಶರಶ್ಚಂದ್ರ ಹಾಗೂ ಎಂ.ಕಾಂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here