ಕ್ಯಾಬೇಜ್ ಭಜಿ

0
523

ಬೇಕಾಗುವ ಸಾಮಾನು:
ಕ್ಯಾಬೇಜ್ 1/2 ಕೆ.ಜಿ, ನೀರುಳ್ಳಿ4, ಕೆಂಪು ಮೆಣಸು 8, ಬೆಳ್ತಿಗೆ ಅಕ್ಕಿ 1/4 ಕೆ.ಜಿ. ಕೊತ್ತಂಬರಿ ಬೀಜ2 ಟೀ ಸ್ಪೂನ್, ಜೀರಿಗೆ 1/4 ಟೀ ಸ್ಪೂನ್, ನೆಲ್ಲಿಕಾಯಿ ಗಾತ್ರದ ಹುಳಿ, ಚಿಟಿಕೆ ಇಂಗು, ಕರಿ ಬೇವು 4 ಎಸಳು, ಉಪ್ಪು, ಎಣ್ಣೆ.
 
ಮಾಡುವ ವಿಧಾನ:
ಕ್ಯಾಬೇಜ್, ನೀರುಳ್ಳಿ ಹಾಗೂ ಕರಿಬೇವನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನೆನೆಸಿದ ಬೆಳ್ತಿಗೆ ಅಕ್ಕಿಗೆ ಕೊತ್ತಂಬರಿ, ಜೀರಿಗೆ ಮೆಣಸು ಹುಳಿ ಉಪ್ಪು ಹಾಗೂ ಇಂಗನ್ನು ಹಾಕಿ ತುಸುವೆ ನೀರು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಹಿಟ್ಟಿಗೆ ಹೆಚ್ಚಿರಿಸಿದ ಹೋಳು ಗಳನ್ನು ಹಾಕಿ ಎಲ್ಲವನ್ನೂ ಮಿಶ್ರಮಾಡಿ ಸಣ್ಣ ಸಣ್ಣ ವಡೆಯಂತೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಚಹಾದ ಜೊತೆಯೂ ಊಟಕ್ಕೂ ಚೆನ್ನಾಗಿರುತ್ತದೆ.
ಸುಮತಿ ಕೆ.ಸಿ.ಭಟ್ ಆದೂರು

LEAVE A REPLY

Please enter your comment!
Please enter your name here