ಕ್ಯಾಬೆಜ್ ಮಂಚುರಿ

0
595

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು: 
2 ಕಪ್ ತುರಿದ ಕ್ಯಾಬೆಜ್, 2 ಕಪ್ ತುರಿದ ಕ್ಯಾರೆಟ್, 1 ಈರುಳ್ಳಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಚಮಚ ಮೈದಾ, ಎಣ್ಣೆ, ಉಪ್ಪು, 1 ಚಮಚ ಮೆಣಸಿನ ಕಾಳು, 1 ಚಮಚ ಸಕ್ಕರೆ, 1 ಚಮಚ ಗೋಧಿ ಹಿಟ್ಟು.
 
 
 
ತಯಾರಿಸುವ ವಿಧಾನ: 
ಕ್ಯಾಬೆಜ್ ಮತ್ತು ಕ್ಯಾರೆಟ್ ಅನ್ನು ಮಿಕ್ಸ್ ಮಾಡಿ ಅದರಿಂದ ನೀರನ್ನು ಹಿಂಡಿ ತೆಗೆಯಿರಿ. ಈಗ ಒಂದು ತಟ್ಟೆಯಲ್ಲಿ ಕ್ಯಾಬೆಜ್ ಮತ್ತು ಕ್ಯಾರೆಟ್ ಮಿಕ್ಸ್ ಮಾಡಿ 2 ಚಮಚ ಮೈದಾ ಮತ್ತು ಉಪ್ಪನ್ನು ಸೇರಿಸಿ. ಸಣ್ಣ ಉಂಡೆಗಳನ್ನು ಮಾಡಿ. ಬಣಾಲೆಯಲ್ಲಿ ಎಣ್ಣೆಯನ್ನು ಕುದಿಸಿ ಉಂಡೆಯನ್ನು ಕರಿದು ಬದಿಗಿಡಿ. ಈಗ ಮತ್ತೊಂದು ಬಣಾಲೆಯಲ್ಲಿ 2 ಚಮಚ ಎಣ್ಣೆಯನ್ನು ಕುದಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸು ಮತ್ತು ಈರುಳ್ಳಿಯನ್ನು ಸೇರಿಸಿ. ನೀರು, ಉಪ್ಪು, ಮೆಣಸಿನ ಕಾಳು, ಸಕ್ಕರೆಯನ್ನು ಸೇರಿಸಿ ಮತ್ತು ಕುದಿಸಿ. 1 ಚಮಚ ಗೋಧಿ ಹಿಟ್ಟನ್ನು ಅರ್ಧ ಕಪ್ ತಣ್ಣೀರಿನೊಂದಿಗೆ ಸೇರಿಸಿ ಚೆನ್ನಾಗಿ ಕಲಸಿ. ಕರಿದ ಉಂಡೆಯನ್ನು ನಿಧಾನವಾಗಿ ಇದಕ್ಕೆ ಸೇರಿಸಿ. ತರಕಾರಿ ಮಂಚೂರಿಯನ್ನು 3-4 ನಿಮಿಷಗಳವರೆಗೆ ಬೇಯಿಸಿ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ.

LEAVE A REPLY

Please enter your comment!
Please enter your name here