ಕ್ಯಾಬಿನೆಟ್ ಪ್ರಮುಖ ತೀರ್ಮಾನಗಳು

0
443

ಬೆಂಗಳೂರು ಪ್ರತಿನಿಧಿ ವರದಿ
ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಫೆಬ್ರವರಿ 6 ರಿಂದ 10ರ ತನಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 6ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜಂಟಿ ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆಗೆ ಪತ್ರ ಕಳುಹಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
 
ಕ್ಯಾಬಿನೆಟ್ ತೀರ್ಮಾನಗಳ ವಿವರ:
ಸೌರ ನೀತಿ 2014-2021ರ ನೀತಿಯಲ್ಲಿ ತಿದ್ದುಪಡಿ-2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದೆ. ಸೌರ ವಿದ್ಯುತ್ ನೀತಿ ಅನ್ವಯ ರಾಜ್ಯ ತುಮಕೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ಮನೆಯ ಮೇಲ್ಚಾವಣೆಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ವಿಪುಲ ಅವಕಾಶಗಳಿದ್ದು, ಇದಕ್ಕಾಗಿ ಸೌರ ವಿದ್ಯುತ್ ನೀತಿಗೆ ತಿದ್ದುಪಡಿ ನೀಡಲು ಸಮ್ಮತಿ.
ಫೆಬ್ರವರಿ 6ರಂದು ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದೆ. 5 ದಿನಗಳ ಅಧಿವೇನ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಶುವೈದ್ಯ ಇಲಾಖೆಯಲ್ಲಿ 550 ಹುದ್ದೆಗಳ ನೇರ ನೇಮಕಾತಿಗೆ ತೀರ್ಮಾನಿಸಲಾಗಿದೆ.
ಗದಗದಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜು ಆರಂಭವಾಗಲಿದೆ. ಇದಕ್ಕಾಗಿ 58 ಕೋಟಿ ರೂ. ಮಂಜೂರು
ಕೆಎಸ್ ಎಫ್ ಸಿ ಗೆ 500ಕೋಟಿ ಷೇರು ಬಂಡವಾಳ ಹೂಡಿಕೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ 330 ಹೆಕ್ಟೇರ್ ನಲ್ಲಿ ರಬ್ಬರ್ ಮರು ನಾಟಿ ಮಾಡಲಾಗುತ್ತದೆ.
ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ಉನ್ನತೀಕರಿಸಿ ಒಂದು ನೂರು ಮಹಿಳಾ ಹಾಗೂ ಐದು ನೂರು ಪುರುಷ ಬಂಧಿಗಳನ್ನು ಇರಿಸುವ ಕೇಂದ್ರ ಕಾರಾಗೃಹವನ್ನಾಗಿ ರೂಪಿಸಿ, ವಿವಿಧ ವೃಂದದ 134 ಹುದ್ದೆಗಳನ್ನು ಸೃಜಿಸಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ 18 ವಾಹನಗಳನ್ನು ಖರೀದಿಸಲು ಸಂಪುಟ ಅನುಮತಿ.
ಪೊಲೀಸ್ ವಸತಿಗೃಹ-2020 ಯೋಜನೆಗೆ ಸಂಪುಟ ಸಮ್ಮತಿ-1818 ಕೋಟಿ ರೂ. ಅಂದಾಜು ವೆಚ್ಚ ಯೋಜನೆ ಪರಿಷ್ಕರಣೆಯಾಗಿದೆ. 2800 ಕೋಟಿ ವೆಚ್ಚದಲ್ಲಿ 11000 ಪೊಲೀಸ್ ಕ್ವಾರ್ಟರ್ಸ್.
ಧಾರವಾಡದಲ್ಲಿ 22 ಕೋಟಿ ವೆಚ್ಚದಲ್ಲಿ ನೂತನ ತಾರಾಲಯ
ನಗರ ಪ್ರದೇಶಗಳಲ್ಲಿ ನರ್ಮ್-2 ಯೋಜನೆಯಡಿ ಬಿಎಂಟಿಸಿಗೆ 134 ಮಿನಿ ಬಸ್ ಖರೀದಿಸಲು 32.33 ಕೋಟಿ ರೂ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮುಂದಿನ ಮೂರು ವರ್ಷಗಳಲ್ಲಿ 1,395.58 ಕೋಟಿ ರೂ. ವೆಚ್ಚದಲ್ಲಿ 195 ಸೇತುವೆಗಳನ್ನು ನಿರ್ಮಾಣ ಮಾಡಲು ಅನುಮೋದನೆ. 2017-18 ನೇ ಸಾಲಿನಲ್ಲಿ 350 ಕೋಟಿ ರೂ., 2018-19 ನೇ ಸಾಲಿನಲ್ಲಿ 450 ಕೋಟಿ ರೂ. ಹಾಗೂ 2019-20 ನೇ ಸಾಲಿನಲ್ಲಿ 495.58 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಸೇತುವೆಗಳನ್ನು ನಿರ್ಮಿಸಿ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 103.53 ಕೋಟಿ ರೂ. ವೆಚ್ಚದಲ್ಲಿ ರೋಗಗಳ ಪತ್ತೆ ಹಚ್ಚುವ ವೈದ್ಯಕೀಯ ಡಯೋಗೋಸ್ಟಿಕ್ಸ್ ಯಂತ್ರಗಳ ಖರೀದಿಗೆ ಅನುಮೋದನೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಉಪಾಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ನೇಮಕಾತಿಗೆ ಸಮ್ಮತಿ
ಉತ್ತರಕನ್ನಡ ಜಿಲ್ಲೆ ಕಾರವಾರ ಬಂದರು ಪ್ರದೇಶದಲ್ಲಿ 125 ಕೋಟಿ ರೂ. ವೆಚ್ಚದಲ್ಲಿ 800 ಮೀಟರ್ ತಡೆಗೊಡೆ ನಿರ್ಮಾಣ

LEAVE A REPLY

Please enter your comment!
Please enter your name here