ಕ್ಯಾನ್ಸರ್ ತಪಾಸಣಾ ಶಿಬಿರ

0
184

 
ವರದಿ: ಸುನೀಲ್ ಬೇಕಲ್
ವೈದ್ಯರ ದಿನಾಚರಣೆಯ ಅಂಗವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಜು.1 ರಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ರ ತನಕ ನಡೆಯಲಿರುವ ಈ ಶಿಬಿರದಲ್ಲಿ ತಪಾಸಣೆ ಮತ್ತು ಸಲಹೆ ಸಂಪೂರ್ಣ ಉಚಿತವಾಗಿರುತ್ತದೆ.
 
 
 
ಸ್ತನದ ಭಾಗದಲ್ಲಿ ಗೆಡ್ಡೆ, ಸ್ತನದ ತೊಟ್ಟಿನಲ್ಲಿ ಬಿಳಿ ಅಥವಾ ಕೆಂಪು ಬಣ್ಣದ ದ್ರವದ ಸೋರುವಿಕೆ, ಋತು ಸಮಯದಲ್ಲಿ ಅಧಿಕ ರಕ್ತ ಹೋಗುವುದು, ಋತು ಚಕ್ರದಲ್ಲಿ ಏರುಪೇರು, ವಾಸನೆಯಿಂದ ಕೂಡಿದ ಬಿಳಿ ಸೆರಗು- ಈ ಎಲ್ಲಾ ಲಕ್ಷಣಗಳಿರುವವರು ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಸೂಕ್ತ.
 
 
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ರೋಗಶಾಸ್ತ್ರ ತಜ್ಞರಾದ ಡಾ| ರಶ್ಮಿ.ಸಿ ಕುಂದರ್, ಪ್ರಸೂತಿ ತಜ್ಞರಾದ ಡಾ| ಕಮಲಾ ಭಟ್ ಈ ಶಿಬಿರದಲ್ಲಿ ರೋಗ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08256-237611/615/236133ನ್ನು ಸಂಪಕರ್ಿಬಹುದು ಎಂದು ಆಸ್ಪತ್ರೆಯ ಕಾರ್ಯನಿರ್ವಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here