ಕೌಶಾಲ್ಯಾಭಿವೃದ್ದಿಯಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯ

0
506

 
ವರದಿ: ಸುನೀಲ್ ಬೇಕಲ್
ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃಧ್ದಿ ಯೋಜನೆಯಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಕೌಶಾಲ್ಯಾಭಿವೃದ್ದಿ ತರಬೇತಿಯ ಸಮಾರೋಪ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಪರಮ ಪೂಜ್ಯಡಾ.ಡಿ. ವೀರೆಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಸುಪುತ್ರಿಯಾದ ಶ್ರಧ್ದಾ ಅಮಿತ್ರವರು ಹಿಂದೆ ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿತ್ತು, ಆದರೆ ಈಗ ಅದು ಬದಲಾಗಿದೆ ಮನೆಯಲ್ಲಿ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಆದಾಯ ಬರುವಂತಹ ಬೇರೆ ಬೇರೆ ಸ್ವ-ಉದ್ಯೋಗ ಮಾಡಿಕೊಂಡರೆ ಕುಟುಂಬದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ. ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃಧ್ದಿ ಯೋಜನೆಯು ನಮ್ಮ ಗುಂಪಿನ ಸದಸ್ಯರಿಗೆ ಜಿಲ್ಲೆಯಲ್ಲಿ 25 ವಿವಿಧ ರೀತಿಯ ಕೌಶಾಲ್ಯಾಭಿವೃದ್ದಿಯನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ. ಇತರೆ ದೇಶಗಳಲ್ಲಿ ಯುವ ಮಹಿಳೆಯರಲ್ಲದೇ ವಯಸ್ಕ ಮಹಿಳೆಯರು ತಮ್ಮಜೀವನೋಪಾಯಕ್ಕಾಗಿ ವ್ಯಾಪಾರ ಹಾಗೂ ಸಣ್ಣ ಪುಟ್ಟಉದ್ಯೋಗವನ್ನು ಮಾಡುತ್ತಾರೆ. ಹಾಗೆಯೇ ಇಂದು ನೀವು ತರಬೇತಿ ಪಡೆದು ಇಷ್ಟೊಂದು ವಿಧದ ಅಲಂಕಾರಿಕ ವಸ್ತುಗಳನ್ನು ತಯಾರಿಸಿದ್ದು ಮುಂದಿನ ದಿನಗಳಲ್ಲಿ ಇದೇ ನಿಮ್ಮಆದಾಯ ವೃತ್ತಿಯಾಗಲೆಂದು ಎಲ್ಲರಿಗೂ ಶುಭಕೋರಿದರು.
 
 
ಈ ಕಾರ್ಯಕ್ರಮದಲ್ಲಿ ಕೌಶಾಲ್ಯಾಭಿವೃದ್ಧಿ ತರಬೇತಿಯನ್ನು ಪಡೆದ ಸುಮಾರು 100 ಜನ ಮಹಿಳೆಯರು ಭಾಗವಹಿಸಿದ್ದರು ಹಾಗೂ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಪ್ರಾಸ್ತಾವಿಕ ಮಾತನಾಡಿ ಯೋಜನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕರಾದ ಶಿವಾನಂದ ಆಚಾರ್ಯರವರು, ದೇವನಹಳ್ಳಿ ತಾಲ್ಲೂಕಿನ ಯೋಜನಾಧಿಕಾರಿ ಅಕ್ಷತಾರೈ, ತರಬೇತಿ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here