ಕೌಶಲ್ಯ ಅಭಿವೃಧ್ದಿ ತರಬೇತಿ: ಅರ್ಜಿ ಆಹ್ವಾನ

0
470

ಮ0ಗಳೂರು ಪ್ರತಿನಿಧಿ ವರದಿ
ಕೌಶಲ್ಯ ಅಭಿವೃಧ್ದಿ ತರಬೇತಿ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಉಚಿತವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ 3 ತಿಂಗಳಿಂದ 6 ತಿಂಗಳ ಅವಧಿಯ ಸಿಸ್ಕೊ ಐ.ಟಿ. ಎಸೆನ್ಶಿಯಲ್ಸ್, ಟ್ಯಾಲಿ ಇ.ಆರ್.ಪಿ 9, ಅಡ್ವಾನ್ಸ್ಡ್ ವೆಲ್ಡಿಂಗ್ ಟೆಕ್ನೋಲಜಿ ಕೌಶಲ್ಯ ಅಭಿವೃಧ್ದಿ ತರಬೇತಿಯನ್ನು ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಕೆ.ಜಿ.ಟಿ.ಟಿ.ಐ) ನಲ್ಲಿ ನೀಡಲಾಗುತ್ತಿದೆ.
 
 
 
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನಿಯಮಾನುಸಾರ ಲಭ್ಯವಿರುವ ಶಿಷ್ಯವೇತನವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಮುಖಾಂತರ ನೀಡಲಾಗುವುದು. ಅರ್ಜಿಗಳನ್ನು ಸೆಪ್ಟಂಬರ್ 29 ರೊಳಗೆ ನಿರ್ದೇಶಕರು ಕೆ.ಜಿ.ಟಿ.ಟಿ.ಐ ಮಂಗಳೂರು (ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, 2ನೇ ಮಹಡಿ, ಕದ್ರಿಹಿಲ್ಸ್) ಇವರಿಗೆ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0824-2211477 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here