ಕೋವಿಡ್ ಲಸಿಕೆ ಪಡೆದುಕೊಂಡ ಈಶವಿಠಲದಾಸ ಶ್ರೀ

0
2298
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ವಿಠಲದಾಸ ಸ್ವಾಮೀಜಿಯವರು ಲಸಿಕೆ ಪಡೆದುಕೊಂಡರು.

ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಯುವ ಉತ್ಸಾಹಿ ಬಳಗ (ರಿ‌.) ಕೇಮಾರು ಇದರ ವತಿಯಿಂದ ಕೊವಿಡ್ ಲಸಿಕಾ ಶಿಬಿರವು ಕೇಮಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.25 ರಂದು ಜರಗಿತು‌.

45 ವರ್ಷಕ್ಕಿಂತ ಮೇಲ್ಪಟ್ಟ 60 ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಹಾಗೂ 28 ನಾಗರಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು‌.
ಈ ಸಂದರ್ಭದಲ್ಲಿ ಪಾಲಡ್ಕ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರಿಮತಿ ಶುಭಲತಾ ಪಿ.ಎಸ್, ಹಾಗೂ ಸಿಬ್ಬಂದಿ ವರ್ಗ , ಆಶಾ ಕಾರ್ಯಕರ್ತೆ, ಯುವ ಉತ್ಸಾಹಿ ಬಳಗ (ರಿ‌‌‌.)ಕೇಮಾರು ತಂಡದ ಅಧ್ಯಕ್ಷ ನಿತಿನ್ ಅಮೀನ್, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಯುವ ಉತ್ಸಾಹಿ ಬಳಗ (ರಿ.) ಕೇಮಾರು ಇದರ ಜಂಟಿ ಆಶ್ರಯದಲ್ಲಿ ಕೇಮಾರು ಸರಕಾರಿ ಶಾಲೆಯಲ್ಲಿ ನಡೆದ ಕೊವಿಡ್ ಲಸಿಕಾ ಶಿಬಿರದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ವಿಠಲದಾಸ ಸ್ವಾಮೀಜಿಯವರು ಲಸಿಕೆ ಪಡೆದುಕೊಂಡರು.

LEAVE A REPLY

Please enter your comment!
Please enter your name here