ಕೋಮುವಾದಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ

0
325

 
ವರದಿ-ಚಿತ್ರ: ಸಂತೋಷ ಬಜಾಲ್
DYFI ನಾಯಕ ಶ್ರೀನಿವಾಸ್ ಬಜಾಲ್ ರವರ 14 ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ಬಜಾಲ್ ಸಂತ ಜೋಸೇಫರ ಫ್ರೌಢಶಾಲೆಯಲ್ಲಿ ನಡೆಯಿತು.
 
ಕಾರ್ಯಕ್ರಮವನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಾದ ಎನ್. ಉದಯಕಿರಣ್ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಬಲಿಷ್ಠ ಯುವಜನರ ಪಡೆಯನ್ನು ಹೊಂದಿರುವಂತಹ ಸಂಘಟನೆ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ ದ್ವನಿ ಎತ್ತುವುದರ ಜೊತೆಗೆ ಕಳೆದ 14 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಸುವ ಕೆಲಸ ಏನಿದೆ ಅದು ನಿಜಕ್ಕೂ ಶ್ಲಾಘನೀಯವಾದದ್ದು.
 
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಇವತ್ತು ಜಿಲ್ಲೆಯ ಸೌಹರ್ದತೆಯನ್ನು ಹಾಳುಗೆಡವುವಂತಹ ಕೋಮುವಾದಿ ಶಕ್ತಿಗಳು ಯುವಜನತೆಯನ್ನು ಅವರ ನೈಜ ಸಮಸ್ಯೆಗಳ ಆಧಾರದಲ್ಲಿ ಸಂಘಟಿಸುವ ಬದಲು ಅವರ ಮನಸ್ಸಲ್ಲಿ ಕೋಮುದ್ವೇಷ ವಿಷವನ್ನು ಹರಡಿಸಿ ಸಮಾಜವನ್ನು ಒಡೆಯುವಂತಹ ಕೃತ್ಯಗಳಲ್ಲಿ ತೊಡಗಿಸುವ ಮೂಲಕ ಈ ಜಿಲ್ಲೆಯ ಸೌಹರ್ದತೆಗೆ ಧಕ್ಕೆ ತರುವಂತಹ ಮತ್ತು ಮುಗ್ಧ ಯುವಜನರನ್ನು ಜೈಲುಪಾಲು ಮಾಡುವ ಮೂಲಕ ಅವರನ್ನು ಕ್ರಿಮಿನಲ್ ಗಳನ್ನಾಗಿ ಪರಿವರ್ತಿಸುವ ಕೆಲಸಗಳಲ್ಲಿ ತೊಡಗಿದೆ. ಇವತ್ತು ಇದೇ ಶ್ರೀನಿವಾಸ್ರವರನ್ನು ಕೊಂದಂತಹ ಹಂತಕರು ಸುಪರಿ ಕಿಲ್ಲರ್ ಗಳು ಜಿಲ್ಲೆಯಲ್ಲಿ ಹಲವು ಹತ್ಯೆಗಳನ್ನು ನಡೆಸಿ ಜೈಲುಪಾಲಾಗಿರುವುದನ್ನು ಕಂಡಿದ್ದೇವೆ. ಆದ್ದರಿಂದ ಯುವಜನರು ಈ ಕೋಮುವಾದಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ ನವಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
 
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಾದ ಡಾ|| ಸೋನಾಲಿ. ಸ್ಥಳೀಯ ಮುಖಂಡರಾದ ಆಶೋಕ್ ಸಾಲ್ಯಾನ್, ವರಪ್ರಸಾದ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಙಈ ಬಜಾಲ್ನ ಮಾಜಿ ಮುಖಂಡರಾದ ಸುರೇಶ್ ಬಜಾಲ್ ವಹಿಸಿದ್ದರು.
 
DYFI ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತವಿಕ ಭಾಷಣ ಮಾಡಿದರು. DYFI ಬಜಾಲ್ ಘಟಕದ ಕಾರ್ಯದರ್ಶಿ ರಿತೇಶ್ ಪಕ್ಕಲಡ್ಕ ನಿರೂಪಿಸಿದರು ಧೀರಜ್ ಪಕ್ಕಲಡ್ಕ ಸ್ವಾಗತಿಸಿ ಪ್ರಜ್ವಲ್ ವಂದಿಸಿದರು.
ರಕ್ತದಾನ ಶಿಬಿರವನ್ನು DYFI ರಕ್ತನಿಧಿ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಯಿತು ಶಿಬಿರದಲ್ಲಿ 50ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here