ಕೋಟಿರುದ್ರ ಸಮಿತಿಯ ಅಧ್ಯಕ್ಷರಾಗಿ ಶಿತಿಕಂಠ ಗಂಗಾಧರ ಹಿರೇ ಭಟ್

0
398

 
ಬೆಂಗಳೂರು ಪ್ರತಿನಿಧಿ ವರದಿ
ಗೋಕರ್ಣ ಶ್ರೀ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ಪ್ರತಿಯೊಬ್ಬ ಶಿಷ್ಯ ಭಕ್ತನೂ ಭಾಗವಹಿಸಿ, ಒಟ್ಟು ಒಂದು ಕೋಟಿ ರುದ್ರ ಪಠನ ನಡೆಯಬೇಕು ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಕಲ್ಪಿಸಿದ್ದರು.
 
ಅದಕ್ಕಾಗಿ ರಚಿಸಿದ ಕೋಟಿರುದ್ರ ಸಮಿತಿಯನ್ನು ಇದೀಗ ಪುನರ್ರಚಿಸಲಾಗಿದೆ. ನೂತನ ಸಮಿತಿ ಅಧ್ಯಕ್ಷರಾಗಿ ಶಿತಿಕಂಠ ಗಂಗಾಧರ ಹಿರೇ ಭಟ್ ಹಾಗೂ ಕಾರ್ಯದರ್ಶಿಯಾಗಿ ಶ್ರೀಧರ ನಾರಾಯಣ ಉಪಾಧ್ಯ ಅವರನ್ನು ನೇಮಿಸಲಾಗಿದೆ.

LEAVE A REPLY

Please enter your comment!
Please enter your name here