ಕೋಚ್ ರೇಸ್ ನಲ್ಲಿ ಕನ್ನಡಿಗರು

0
569

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಟೀಂ ಇಂಡಿಯಾ ಕೋಚ್ ಹುದ್ದೆಗೆ ಭಾರಿ ರೇಸ್ ಶುರುವಾಗಿದೆ. ಈಗಾಗಲೇ ಹಲವು ಮಂದಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ದೇಶಿ ಮತ್ತು ವಿದೇಶಿ ಕೋಚ್​`ಗಳು ಇದ್ದಾರೆ.
 
 
ಕಳೆದ ತಿಂಗಳು ಬಿಸಿಸಿಐ ತನ್ನ ವೆಬ್’ಸೈಟ್’ನಲ್ಲಿ ಕೋಚ್ ಸ್ಥಾನಕ್ಕೆ ಜಾಹೀರಾತು ನೀಡಿತ್ತು. ಇಲ್ಲಿಯವರೆಗೂ 57 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟರ್ ಗಳಾದ ಕರ್ನಾಟಕದ ಆನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್, ರವಿಶಾಸ್ತ್ರಿ, ನ್ಯೂಜಿಲೆಂಡ್​​ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ನ್ಯೂಜಿಲೆಂಡ್​ನ ಮತ್ತೊಬ್ಬ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ, ಆಸ್ಟ್ರೇಲಿಯಾಗೆ ಎರಡು ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರಿಕಿ ಪಾಂಟಿಂಗ್, ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜಾಸನ್ ಗಿಲ್ಲೆಸ್ಪಿ, ಸೌತ್ ಆಫ್ರಿಕಾದ ಪ್ಯಾಡಿ ಅಪ್ಟನ್ ಸೇರಿ ಹಲವು ಮಂದಿ ರೇಸ್ ನಲ್ಲಿದ್ದಾರೆ.
 
 
 
ಇನ್ನು ಶಾರ್ಟ್ ಲಿಸ್ಟ್’ನಲ್ಲಿ ಪ್ರಮುಖ ಸ್ಪರ್ಧಾಳುಗಳಲ್ಲಿ ಭಾರತ ತಂಡದ ಮಾಜಿ ನಾಯಕರಾದ ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ, ಸಂಜಯ್ ಬಂಗಾರ್, ಸಂದೀಪ್ ಪಾಟೀಲ್ ಇದ್ದಾರೆ.
 
 
 
ಇದೇ ತಿಂಗಳು 24 ರಂದು ಹಿಮಾಚಲ ಪ್ರದೇಶದ ಧರ್ಮಾಶಾಲಾ ಕ್ರಿಕೆಟ್ ಸಂಸ್ಥೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅಂದೇ ಭಾರತ ಕ್ರಿಕೆಟ್ ತಂಡದ ಕೋಚ್’ಅನ್ನು ನೇಮಕ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here