ಕೋಕೆನ್ ಮಾರಾಟ ಮಾಡುತ್ತಿದ್ದ ಆಫ್ರಿಕಾ ವ್ಯಕ್ತಿ ಬಂಧನ

0
590

 
ಮಂಗಳೂರು ಪ್ರತಿನಿಧಿ ವರದಿ
ಮಾದಕ ಪದಾರ್ಥವಾದ ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಫ್ರಿಕಾದ ಘಾನಾ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ (37) ಎಂಬಾತ ಬಂಧಿತ ಅರೋಪಿಯಾಗಿದ್ದಾನೆ.
 
 
 
ಬಂಧಿತನಿಂದ 5.5 ಲಕ್ಷ ಮೌಲ್ಯದ ಕೋಕೆನ್, 2 ಮೊಬೈಲ್ ಫೋನುಗಳು ಹಾಗೂ 3,300 ರೂ. ಹೀಗೆ ಒಟ್ಟು ರೂ. 5,55,300 ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
 
 
ಈ ಆರೋಪಿ ಗೋವಾ ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡಲು ಬಂದು ಗ್ರಾಹಕರನ್ನು ಹುಡುಕಾಡುತ್ತಿದ್ದ.

LEAVE A REPLY

Please enter your comment!
Please enter your name here