ಕೊಲೆಗೆ ಯತ್ನ!

0
372

 
ಮಂಗಳೂರು ಪ್ರತಿನಿಧಿ ವರದಿ
ಕೋರ್ಟ್ ಅವರಣದಲ್ಲಿಯೇ ಆರೋಪಿಯ ಕೊಲೆಗೆ ಯತ್ನ ನಡೆದ ಘಟನೆ ಮಂಗಳೂರು ಜಿಲ್ಲೆ ನ್ಯಾಯಾಲಯದ ಅವರಣದಲ್ಲಿ ನಡೆದಿದೆ.
 
 
ಪಡೀಲ್ ಹೋಮ್ ಸ್ಟೇ ಮೇಲಿನ ದಾಳಿ ಕೇಸ್ ನ ಆರೋಪಿಯನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ವಿಚಾರ ವೇಳೆ ಕೋರ್ಟ್ ಗೆ ಬಂದಿದ್ದ ವೇಳೆ ಹತ್ಯೆಗೆ ಯತ್ನಿಸಲಾಗಿದೆ.
 
 
ಚೂರಿಯಿಂದ ಇರಿದು ಆರೋಪಿ ಸುಭಾಷ್ ಕೊಲೆಗೆ ಯತ್ನ ನಡೆದಿದೆ. ರಾಜ ಅಲಿಯಾಸ್ ಜಪಾನ್ ಮಂಗ ಆರೋಪಿಯನ್ನು ಹತ್ಯೆ ಮಾಡಲು ಯತ್ನಿಸಿದ್ದ ಎಂದು ತಿಳಿದುಬಂದಿದೆ. ರಾಜ ಸಣ್ಣಪುಟ್ಟ ಅಪರಾಧ ಕೇಸ್ ಗಳಲ್ಲಿ ಗುರತಿಸಿಕೊಂಡಿದ್ದ.ಸುಭಾಷ್ ಸಹಚರರು ಮತ್ತು ರಾಜನ ಮಧ್ಯೆ ಕೋರ್ಟ್ ಆವರಣದಲ್ಲೇ ಮಾರಾಮಾರಿ ನಡೆದಿದೆ.
ಸದ್ಯ ರಾಜ ಅಲಿಯಾಸ್ ಜಪಾನ್ ಮಂಗನನ್ನು ಬಂದರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಕೋರ್ಟ್ ನಲ್ಲಿ 2012 ಜುಲೈ 29ರಲ್ಲಿ ಪಡೀಲ್ ಹೋಮ್ ಸ್ಟೇ ಮೇಲೆ ನಡೆದ ದಾಳಿ ಪ್ರಕರಣದ ವಿಚಾರಣೆ ನಡೆದಿತ್ತು.

LEAVE A REPLY

Please enter your comment!
Please enter your name here