ಹಕ್ಕಿ ಜ್ವರವನ್ನು ವೈಜ್ಞಾನಿಕವಾಗಿ ಹಕ್ಕಿ ಇನ್ ಫ್ಲೂಯೆನ್ ಜ ಅಥವಾ ಫ್ಲೂ ಎನ್ನುತ್ತಾರೆ. ಹಕ್ಕಿ ಜ್ವರ ಹೆಚ್ಚಾಗಿ ಕೋಳಿ ಹಾಗೂ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಎಚ್ 5ಎನ್ 1 ಎಂಬ ವೈರಸ್ ನಿಂದ ಕಾಣಿಸಿಕೊಳ್ಳುವ ರೋಗವಾಗಿದೆ. ಒಂದು ಕೋಳಿಯಲ್ಲಿ ಕಾಣಿಸಿಕೊಂಡರೆ 48 ಗಂಟೆಗಳಲ್ಲಿ ಹರಡುತ್ತದೆ. ಹಕ್ಕಿಗೆ ಹರಡುವ ಈ ವೈರಾಣು ಮಾನವನ ದೇಹ ಸೇರುತ್ತದೆ. ಈ ಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹಕ್ಕಿಗಳ ಸಂಪರ್ಕಕ್ಕೆ ಹೋದಾಗ ಎಚ್ಚರಿಕೆ ವಹಿಸಬೇಕು. ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರದಲ್ಲಿ ರೋಗಾಣಿಗಳು ಇರುತ್ತದೆ.
ಮೊದಲ ಪ್ರಕರಣ:
1997ರಲ್ಲಿ ಮೊತ್ತಮೊದಲು ಮಾನವನಲ್ಲಿ ಹಾಂಕಾಂಗ್ ನಲ್ಲಿ ಪತ್ತೆಯಾಗಿತ್ತು. ಬಳಿಕ ಬೇರೆ ಬೇರೆ ದೇಶಗಳಲ್ಲಿ ಹಬ್ಬಿತ್ತು.
ಲಕ್ಷಣ:
ಹಕ್ಕಿ ಜ್ವರ ಒಳಗಾಗುವ ವ್ಯಕ್ತಿಗಳಲ್ಲಿ ಎರಡು-ಮೂರು ದಿನಗಳಲ್ಲಿ ರೋಗ ಉಲ್ಬಣವಾಗುತ್ತದೆ. ಅತಿಯಾದ ಜ್ವರ, ನೆಗಡಿ, ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ಸ್ನಾಯುಗಳಲ್ಲಿ ನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಆರಂಭಗೊಂಡ 48 ಗಂಟೆಗಳೊಳಗೆ ಸಂಬಂಧಪಟ್ಟ ಔಷಧಿ ಸೇವಿಸಿದರೆ ರೋಗದ ತೀವ್ರತೆ ಬಹಳಷ್ಟು ಕಡಿಮೆಯಾಗುತ್ತದೆ.
ಮುಂಜಾಗ್ರತೆ:
ಮನೆ, ಫಾರಂಗಳಲ್ಲಿ ಕೋಳಿ ಸಾಕುವವರು ಎಚ್ಚರದಿಂದ ಇರಬೇಕು. ಕೋಳಿಗಳು ವಾಸಿಸುವ ಸ್ಥಳಗಳಿಗೆ ಹೋದ್ರೆ ಮಾಸ್ಕ್ ಧರಿಸಬೇಕು. ಮನೆಗೆ ತೆರಳಿದ ನಂತರ ಸಾಬೂನು ಬಳಸಿ ತೊಳೆಯಬೇಕು. ಕೋಳಿ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ದಾವಣಗೆರೆಗೆ ವಕ್ಕರಿಸಿದ ಹಕ್ಕಿ ಜ್ವರ
ಮೊದಲು ಮೈಸೂರಿನಲ್ಲಿ ಕಾಣಿಸಿಕೊಂಡ ಜ್ವರ ದಾವಣಗೆರೆಗೂ ಹಬ್ಬಿದೆ. ಹರಿಹರದ ಬನ್ನಿಕೋಡದ 10 ಕಿ.ಮೀ. ಸುತ್ತಮುತ್ತ ಹೈಅಲರ್ಟ್ ಅಧಿಕಾರಿಗಳು ಮಾಡಲಾಗಿದೆ.