ಕೊರೋನಾ ಭೀತಿ: ಜನತಾ ಕಫ್ರ್ಯೂ

0
452


ನಮ್ಮ ಪ್ರತಿನಿಧಿ ವರದಿ

ಚೀನಾದಲ್ಲಿ ಜನ್ಮತಾಳಿದ ಕೊರೋನಾ ವೈರಸ್ ವಿಶ್ವದೆಲ್ಲೆಡೆ ವ್ಯಾಪಿಸಿ ಭಾರತವನ್ನು ತಲುಪಿದೆ. ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ನಿಟ್ಟನಲ್ಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22ರಂದು ಭಾನುವಾರ ‘ಜನತಾ ಕಫ್ರ್ಯೂ’ ಪಾಲಿಸೋಣ ಎಂದು ಕರೆ ನೀಡಿದ್ದಾರೆ.


ಅಂದು ಬೆಳಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಯಾರೊಬ್ಬರು ಮನೆಯಿಂದ ಹೊರಗೆ ಬರಬಾರದು. ಜತೆಗೆ ಆ ದಿನ ಸಂಜೆ 5 ಗಂಟೆಗೆ 5 ನಿಮಿಷಗಳ ಕಾಲ ಮನೆಯ ಬಾಗಿಲು, ಕಿಟಕಿ, ಬಾಲ್ಕನಿಯ ಬಳಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ನೆರೆಹೊರೆಯವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಸಲ್ಯೂಟ್ ಹೇಳೋಣ, ಆತ್ಮಸ್ಥೈರ್ಯ ಹೆಚ್ಚಿಸೋಣ ಎಂದು ಪ್ರಧಾನಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here