ಕೊರೋನಾಕ್ಕೆ ಮತ್ತೊಂದು ಬಲಿ

0
386


ನಮ್ಮ ಪ್ರತಿನಿಧಿ ವರದಿ
ಭಾರತದಲ್ಲಿ ಕೊರೋನಾ ವೈರಸ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ನಿಂದ ಮತ್ತೊಂದು ಸಾವಾಗಿದೆ.
ಮುಂಬೈನ ಕಸ್ತೂರ್ ಬಾ ಆಸ್ಪತ್ರೆಯಲ್ಲಿ 64 ವರ್ಷದ ವೃದ್ಧ ಕೊರೋನಾದಿಂದ ಮೃತ್ತಪಟ್ಟಿದ್ದಾನೆ. ಈ ಮೊದಲು ದೆಹಲಿಯಲ್ಲಿ ಒಂದು ಹಾಗೂ ಕರ್ನಾಟದಲ್ಲಿ ಒಂದು ಕೊರೋನಾ ಸಾವಿನ ಪ್ರಕರಣ ದಾಖಲಾಗಿದೆ.

ಭಾರತದಲ್ಲಿ ಒಟ್ಟು 130 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು,ಮೂವರು ಸಾವನ್ನಪ್ಪಿದ್ದು, 13 ಮಂದಿ ಗುಣಮುಖರಾಗಿದ್ದಾರೆ.
ಉತ್ತರಾಖಂಡ್-1, ಲಡಾಕ್-4, ಪಂಜಾಬ್-1, ತಮಿಳುನಾಡು-1, ಆಂಧ್ರಪ್ರದೇಶ-1, ಒಡಿಶಾ-1, ತೆಲಂಗಾಣ-4, ಜಮ್ಮುಕಾಶ್ಮೀರ-3, ರಾಜಸ್ತಾನ-4, ಉತ್ತರಪ್ರದೇಶ-13, ದೆಹಲಿ-7, ಕೇರಳ-27, ಹರಿಯಾಣ-15, ಪ್ರಕರಣ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here