ಕೊರೊನಾ ಲಸಿಕೆ ವಿತರಣಾ ಅಭಿಯಾನ

0
2325
ಕೊರೊನಾ ಲಸಿಕೆ ವಿತರಣಾ ಅಭಿಯಾನ ಉದ್ಘಾಟನೆ

ಮೂಡುಬಿದಿರೆ: ಕೊರೊನ ರೋಗ   ತಡೆಗಟ್ಟಲು ಸರಕಾರ ಉತ್ತಮ ಯೋಜನೆ ಗಳನ್ನು ರೂಪಿಸುತ್ತಿದ್ದು ಆ ಪ್ರಯುಕ್ತ ಮನೆ ಬಾಗಿಲಿಗೆ ಲಸಿಕೆ ಯೋಜನೆಯಂತೆ ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರ ದ ತಜ್ಞ ವೈದ್ಯ ರ ತಂಡ, ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಹಾಗೂ ಜೈನ್ ಮಿಲನ್,ಸ್ವಸ್ತಿಶ್ರೀ ಜೈನ ವಸತಿ ಪ ದವಿ ಪೂರ್ವ ಕಾಲೇಜು ,ಜವನೆರ್ ಬೆದ್ರ ಮೂಡುಬಿದಿರೆ ಇವರ

ಜಂಟಿ ಆಶ್ರಯದಲ್ಲಿ ಮೂಡು ಬಿದಿರೆ  ಶ್ರೀ ಜೈನ ಮಠದ  ಶ್ರೀ ಭಟ್ಟಾರಕ ಭವನ ದಲ್ಲಿ   ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಿತು.

  ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ  ಉದ್ಘಾಟಿಸಿ ಆಶೀರ್ವದಿಸಿದರು. ಅನವಶ್ಯಕ ಓಡಾಟ ನಿಯಂತ್ರಿಸುವ ಜೊತೆಗೆ ಮಾರ್ಗಸೂಚಿ ಅನುಸರಿಸುವಂತೆ ಡಾ ಶಶಿಕಲಾ ಕರೆನೀಡಿದರು.

ಡಾ ಸುಶೀಲ ರವರು ಮಾತನಾಡಿ ಕೊರೊನಾ ಬಗ್ಗೆ ಅಸಡ್ಡೆ ಸಲ್ಲದು; ಮುಖ ಪಟ್ಟಿ ಧರಿಸಲು ಉದಾಸೀನ ಮಾಡದಿರಿ ಎಂದರಲ್ಲದೆ 45 ಕ್ಕಿಂತ ಕೆಳಗಿನ ಯುವಕರಿಗೂ ಕೊರೊನ ಮಾರಕ ರೋಗ ಬಾ ದಿಸುತ್ತಿದೆ. ಎಲ್ಲರೂ ಜಾಗ್ರತರಾಗುವಂತೆ ಮನವಿ ಮಾಡಿದರು.

Advertisement

 ಪ್ರಥಮ ಬಾರಿ 76 ಜನ ಅಭ್ಯರ್ಥಿ ಗಳು ಲಸಿಕೆ ಹಾಕಿಸಿ ಕೊಂಡರು. ರಮೇಶ್ ಶಾಂತಿ , ಕವಿ ನಿರ್ಮಲ ಕುಮಾರ್,ಚಿತ್ರ ಕಲಾವಿದೆ ಬೆಟ್ಕೇರಿ   ವೀಣಾ ದಂಪತಿಗಳು, ಶೀತಲ್ ಇಂದ್ರ, ಸುಧಾ ಪ್ರಥ್ವಿ ರಾಜ್, ಸುಜಾತಾ,ಚಕ್ರೆಶ್ ಅರಿಗಾ, ಶ್ರೀಪಾಲ್ ಎಸ್, ವಕೀಲ ರಾದ ಶಾಂತಿ ಪ್ರಕಾಶ್ ಮೊದಲಾದವರು ಲಸಿಕೆ ಹಾಕಿಸಿಕೊಂಡರು.

LEAVE A REPLY

Please enter your comment!
Please enter your name here