ಕೊರೊನಾ ಭೀತಿ:ಸ್ವಯಂಪ್ರೇರಿತ ಬಂದ್‌ಗೆ ನಿರ್ಧಾರ

0
1614

ಮೂಡುಬಿದಿರೆ :ರಾಷ್ಟ್ರ ವ್ಯಾಪ್ತಿ ಕೊರೋನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ,  ತಡೆಗಟ್ಟುವ ಹಿನ್ನೆಲೆಯಲ್ಲಿ ಮೂಡಬಿದ್ರಿಯಾದ್ಯಂತ  ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ ನಂತರ ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ನಡೆಸಲು ಎಲ್ಲರೂ ಒಗ್ಗಟ್ಟಾಗಿ ಸೇರಿ ತೀರ್ಮಾನಿಸಲು ಶಾಸಕ ಉಮಾನಾಥ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷದವರು  ಇಂದು  ಮೂಡಬಿದ್ರಿ ಸ್ವರ್ಣ ಮಂದಿರದಲ್ಲಿ  ಸಭೆ ನಡೆಸಿದರು.  ಈ  ಸಭೆಯಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ , ಜೆ. ಡಿ. ಎಸ್ ನಾಯಕರಾದ ದಿವಾಕರ್ ಶೆಟ್ಟಿ , ಸಿ. ಪಿ. ಎಂ ನಾಯಕರಾದ ಯಾದವ ಶೆಟ್ಟಿ , ಜಿಲ್ಲಾ ಪಂಚಾಯತ್ ಸದಸ್ಯರಾದ ಸುಚರಿತ ಶೆಟ್ಟಿ , ತಹಶೀಲ್ದಾರ್ ಅನಿತಾ ಲಕ್ಷ್ಮಿ , ಮೂಡಬಿದ್ರಿ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ , ಆರೋಗ್ಯ ಅಧಿಕಾರಿ ಡಾ. ಶಶಿಕಲಾ , ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಇಂದು, ಎಲ್ಲಾ  ಪುರಸಭಾ ಸದಸ್ಯರುಗಳು,  ನಗರದ  ಅಂಗಡಿ ಮಾಲಕರು, ಬಸ್, ರಿಕ್ಷಾ, ಕಾರು, ಟೆಂಪೋ ಚಾಲಕ ಮಾಲಕರು ಹಾಗು ನಾಗರಿಕರು ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here