ಕೊರೊನಾ-ಬೆಚ್ಚಿದ ಮೂಡುಬಿದಿರೆ

0
6444

ಮೂಡುಬಿದಿರೆಯಲ್ಲಿ ಹೆಚ್ಚುತ್ತಿದೆ ಕೊರೊನಾ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೀಡುಮಾಡಿದೆ. ಮೂಡುಬಿದಿರೆಯಲ್ಲಿ ಶನಿವಾರ ಮೂರು ಪ್ರಕರಣಗಳು ದೃಢವಾದರೆ ಭಾನುವಾರವೂ ಮೂರು ಪ್ರಕರಣಗಳು ಪಾಸಿಟಿವ್‌ ಬಂದಿವೆ. ಇದರಿಂದಾಗಿ ಪರಿಸರವಾಸಿಗಳಲ್ಲಿ ತೀವ್ರ ಭೀತಿ ಮನೆಮಾಡಿದೆ. ಮೂಡುಬಿದಿರೆಯ ನಾಗರಕಟ್ಟೆಯ ಜನನಿ ಸಮುಚ್ಛಯದ ಎರಡು ಅಂತಸ್ತುಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಮೂಡುಬಿದಿರೆ ಬೆಳುವಾಯಿಯ ಸಮುಚ್ಛಯವೊಂದನ್ನು ಎರಡು ದಿನಗಳ ಹಿಂದೆಯೇ ಸೀಲ್‌ ಡೌನ್‌ ಮಾಡಲಾಗಿತ್ತು. ಒಟ್ಟು ೧೯ಕ್ಕೂ ಅಧಿಕ ಕಂಟೈನ್‌ ಮೆಂಟ್‌ ಝೋನ್‌ ಮೂಡುಬಿದಿರೆಯಲ್ಲಿದೆ.

ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ ಭೀತಿ:ಹೌದು ಮೂಡುಬಿದಿರೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಜನತೆ ಜಾಗೃತರಾಗದಿರುವುದೇ ಇದಕ್ಕೆ ಪ್ರಮುಖ ಕಾರಣ. ಜನತೆ ಸೋಶಿಯಲ್‌ ಡಿಸ್ಟೆನ್ಸ್‌ ಪಾಲಿಸುತ್ತಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿಲ್ಲ ಇವೆಲ್ಲವೂ ಕೂಡಾ ಮೂಡುಬಿದಿರೆ ವ್ಯಾಪ್ತಿಯಲ್ಲಿ ಸೋಂಕು ಹರಡಲು ಪ್ರಮುಖ ಕಾರಣವಾಗುತ್ತಿದೆ. ಪರವೂರುಗಳಿಂದ ಮೂಡುಬಿದಿರೆಗೆ ಆಗಮಿಸಿದವರಲ್ಲಿ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಂಡದ್ದು ಸೇರಿದಂತೆ ಪರವೂರುಗಳಿಗೆ ಪ್ರವಾಸ ಬೆಳೆಸಿದ ಹಿನ್ನಲೆಯಲ್ಲೂ ಕೆಲ ಮಂದಿಗೆ ಸೋಂಕು ಬಾಧಿಸಿದೆ ಎನ್ನಲಾಗಿದೆ.

ಎಲ್ಲಾ ಓಪನ್:‌ ಮೂಡುಬಿದಿರೆಯಲ್ಲಿ ಅಂಗಡಿ ಮಳಿಗೆಗಳು, ಹೊಟೇಲ್‌ ಗಳು ಕಾರ್ಯಾಚರಿಸುತ್ತಿವೆ. ಕೆಲವು ಉದ್ಯಮಿಗಳು ಮಾತ್ರ ಸ್ಯಾನಿಟೈಝರ್‌, ಮಾಸ್ಕ್‌, ಸೋಶಿಯಲ್‌ ಡಿಸ್ಟೆನ್ಸಿಂಗ್‌ ವಿಚಾರದಲ್ಲಿ ಕಾಳಜಿ ವಹಿಸುತ್ತಿರುವುದು ಕಂಡು ಬರುತ್ತಿವೆ. ಇನ್ನನೇಕ ಕಡೆಗಳಲ್ಲಿ ಇವ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

LEAVE A REPLY

Please enter your comment!
Please enter your name here