ಕೊರೊನಾ ತಡೆಗೆ ಗರ್ಮ ಪ್ರಯೋಗ

0
784

ಗೋಕರ್ಣ: ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ ಎಂಬ ಆತಂಕ ಒಂದು ಕಡೆ ಸಾರ್ವಜನಿಕರನ್ನು ಸಂಕಟಕ್ಕೆ ಸಿಲುಕಿಸಿದ್ರೆ, ಇದೇ ಕೊರೊನಾ ವೈರಸ್ ಮುಕ್ತಿಗೋಸ್ಕರ ಗೋಕರ್ಣದಲ್ಲಿ ಗರ್ಮ ಪ್ರಯೋಗ ನಡೆಸಲಾಗಿದೆ. ಅಥರ್ವಣ ಬ್ರಹ್ಮ ಡಾ.ಶ್ರೀಧರ ಅಡಿ ಗುರುಗಳ ಮಾರ್ಗದರ್ಶನದಲ್ಲಿ ಇಂದು ಗೋಕರ್ಣದಲ್ಲಿ ಯಾಗ ನಡೆಸಿದ್ದು, ಕೊರೊನಾ ವೈರಸ್‌ನಿಂದ ಮುಕ್ತಿಗೋಸ್ಕರ ಗೋಕರ್ಣದ ಗಾಯತ್ರಿ ಕೆರೆಯ ದಂಡೆಯ ಮೇಲೆ ಅಗ್ನಿ ಕುಂಡದಲ್ಲಿ ಗರ್ಮ ಪ್ರಯೋಗ ನಡೆಸಲಾಗಿದೆ.

ಗರ್ಮ ಪ್ರಯೋಗ ಎಂದರೇನು?

ನಮ್ಮ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ, ಚಿನ್ನ, ಬೆಳ್ಳಿಯೊಂದಿಗೆ ತುಪ್ಪ ಹಾಕಿ ಅಗ್ನಿ ಕುಂಡದಲ್ಲಿ ಅದನ್ನು ಕುದಿಸಿ, ಆಕಳ ಹಾಲನ್ನು ಹಾಕುವುದರ ಮೂಲಕ ಮಾಡುವ ಯಾಗವೇ ಗರ್ಮ ಪ್ರಯೋಗ ಎಂದು ಉಲ್ಲೇಖಿಸಲಾಗಿದ್ದು, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಹಾಗೂ ವೈರಸ್‌ನಿಂದ ಮುಕ್ತಿಯಾಗಬೇಕೆಂದು ಇಂದು ಪ್ರಾರ್ಥಿಸಲಾಗಿದೆ.
ಗೋಕರ್ಣಕ್ಕೆ ಕಾಶಿಯಿಂದ ಆಗಮಿಸಿರುವ ವೇದಬ್ರಹ್ಮ ಡಾ.ಶ್ರೀಧರ ಅಡಿ, ತಮ್ಮ ಶಿಷ್ಯರೊಂದಿಗೆ ಗರ್ಮ ಪ್ರಯೋಗದಲ್ಲಿ ಯಾಗ ಮಾಡಿದ್ದು, ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಕೊರೊನಾ ವೈರಸ್ ಹೋಗಬೇಕೆಂದು ಪ್ರಾರ್ಥಿಸಿದ್ದಾರೆ.

ಗರ್ಮ ಪ್ರಯೋಗವು ದೇವ ವೈದ್ಯರಾದ ಅಶ್ವಿನಿ ದೇವತೆಗಳಾದ ನಾಸತ್ಯ, ದಸ್ರ ಎಂಬುವವರಿಗೆ ಸಂಬಂಧಪಟ್ಟಿದ್ದಾಗಿದ್ದು ಈ ಯಾಗವು ಸೋಮಯಾಗದ ಒಂದು ಭಾಗವಾಗಿದೆ. ಈ ಯಾಗಕ್ಕೆ ತುಪ್ಪದ ಬದಲಾಗಿ ಕುರಿ ಹಾಗೂ ಆಕಳ ಹಾಲನ್ನು ಮಿಶ್ರಣಮಾಡಿ ಯಜ್ಞ ಆಹುತಿಗಾಗಿ ಬಳಸಲಾಗುತ್ತಿದೆ. 25 ಮಂತ್ರಗಳ ಸಂಪುಟೀಕರಣದಿಂದ ಒಮ್ಮೊಮ್ಮೆ ಯಜ್ಞ ಕುಂಡಕ್ಕೆ ಒಂದೊಂದು ಮಂತ್ರದಿಂದ ಆಹುತಿ ಹಾಕಿದಾಗಲೂ ಯಜ್ಞದ ಅಗ್ನಿಯು 20 ರಿಂದ 30 ಅಡಿಯ ವರೆಗೆ ಚಿಮ್ಮುತ್ತದೆ, ಇದೇ ಈ ಯಜ್ಞದ ವೈಶಿಷ್ಟತೆ. ಈ ಅಗ್ನಿಯು ವಾತಾವರಣವನ್ನು ಶುದ್ದೀಕರಿಸುತ್ತದೆ ಎಂಬುವುದು ನಂಬಿಕೆ. ಸೂರ್ಯ ಹಾಗೂ ನಭೋ ಮಂಡಲಕ್ಕೆ ಕಷ್ಟ ಬಂದಾಗ ಇದೇ ಅಶ್ವಿನಿ ದೇವತೆಗಳೇ ದೇವ ವೈದ್ಯರ ರೂಪದಲ್ಲಿ ಸೂರ್ಯನಿಗೂ ನಭೋಮಂಡಲಕ್ಕೆ ಸುಶ್ರೂಷೆ ನೀಡಿದರು ಎಂಬ ನಂಬಿಕೆಯಿದೆ. ಇದಲ್ಲದೇ ಈ ಯಾಗದಲ್ಲಿ ಪ್ರಥ್ವೀ ದೇವಿ, ಅಗ್ನಿ ಹಾಗೂ ಅಂಬರವನ್ನೂ ಸಹ ಪ್ರತ್ಯೇಕವಾಗಿ ಸ್ತುತಿಸಲಾಗುತ್ತದೆ. ಇಂದು ನಡೆದ ಯಾಗದಲ್ಲೂ ಅದನ್ನೇ ಡಾ. ಶ್ರೀಧರ ಅಡಿ ನೆರವೇರಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಮುಕ್ತಿಗೋಸ್ಕರವೇ ಇಂದು ಗೋಕರ್ಣದಲ್ಲಿ ನಡೆಸಲಾಗಿದೆ.

Advertisement

LEAVE A REPLY

Please enter your comment!
Please enter your name here