ಕೊರಂಗು ಕೃಷ್ಣನ ಹತ್ಯೆಗೆ ಸ್ಕೆಚ್

0
733

ರಾಷ್ಟ್ರೀಯ ಪ್ರತಿನಿಧಿ ವರದಿ
ರೌಡಿಶೀಟರ್ ಕೊರಂಗು ಕೃಷ್ಣನ ಹತ್ಯೆಗೆ ವಿದೇಶದಿಂದ ಡೀಲ್ ರೆಡಿಯಾಗಿದೆ. ಹೆಬ್ಬೆಟ್ಟು ಮಂಜ ವಿದೇಶದಲ್ಲೇ ಕುಳಿತು ಡೀಲ್ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
 
 
 
ಕೊರಂಗು ಕೃಷ್ಣ ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಆಗಿದ್ದಾನೆ. ಹತ್ಯೆಗೆ ಸ್ಕೆಚ್ ಹಾಕಿದ್ದ ಆಶ್ರಫ್, ಸಹಚರ ನದೀಮ್ ಬಂಧನ ಮಾಡಲಾಗಿದೆ. ಹೆಬ್ಬಟ್ಟು ಮಂಜನ ಸಹಚರ ಅಂಬರೀಶ್ ಮೂಲಕ ಡೀಲ್ ಮಾಡಲಾಗಿದೆ.
 
 
 
ಅಂಬರೀಶ್, ಮಂಜನ ಸ್ನೇಹಿತ ಅಶ್ರಫ್ ಗೆ ಡೀಲ್ ನೀಡಿದ್ದ. ಅಂಬರೀಶ್ ಕೊರಂಗು ಹತ್ಯೆಗಾಗಿ ಅಶ್ರಫ್ ಗೆ 6 ಗನ್ ನೀಡಿದ್ದಾನೆ. ಸದ್ಯ ಕೊರಂಗು ಹತ್ಯೆಗೆ ಸ್ಕೆಚ್ ಹಾಕುತ್ತಿದ್ದ ವೇಳೆ ಅಶ್ರಫ್ ಬಂಧನವಾಗಿದ್ದಾನೆ. ಅಶ್ರಫ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಅಡಿಕೆ ತೋಟವೊಂದರಲ್ಲಿ ಬೆಂಗಳೂರಿನಲ್ಲಿ ಕೊರಂಗು ಕೃಷ್ಣನ ಹತ್ಯೆಗಾಗಿ ಸ್ಕೆಚ್ ಸಿದ್ಧಪಡಿಸುತ್ತಿದ್ದ.
 
 
ಅಶ್ರಫ್ ಅಂಬರೀಶ್ ನೀಡಿದ್ದ 6 ಗನ್ ಪೈಕಿ 2 ಗನ್ ಮಾಡಿದ್ದ. ತಲಾ 1.25 ಲಕ್ಷ ರೂ.ಗೆ 2 ಗನ್ ಮಾರಿದ್ದ. ಮಥಾನ್ ಹಾಗೂ ಇಕ್ಬಾಲ್ ಎಂಬುವವರಿಗೆ ಗನ್ ಮಾರಿದ್ದ.

LEAVE A REPLY

Please enter your comment!
Please enter your name here