ಕೊಬ್ಬರಿಗೆ ಬೆಂಬಲ ಬೆಲೆ ಏರಿಕೆ ಮಾಡಬೇಕು

0
505

ಬೆಂಗಳೂರು ಪ್ರತಿನಿಧಿ ವರದಿ
ನೋಟ್ ಬ್ಯಾನ್ ನಿಂದ ರೈತ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮಾರುಕಟ್ಟೆ ಕುಸಿದಿದೆ. ರೈತರ ಬೆಳೆಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
 
 
 
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನಿವಾಸದಲ್ಲಿ ನಡೆದ ತೆಂಗು ಬೆಳೆಗಾರರ ಸಭೆ ಬಳಿಕ ಮಾತನಾಡಿದ ಗೌಡರು, ರೈತರು ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ.ಡಿಜಿಟಲ್ ಇಂಡಿಯಾ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ನಮ್ಮ ದೇಶದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಕಷ್ಟ ಸಾಧ್ಯವಾಗಿದೆ. ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇನೆ. ತೆಂಗು ಅಷ್ಟೇ ಅಲ್ಲ ಅಡಿಕೆ, ರಬ್ಬರ್ ಗೂ ತೊಂದರೆ ಇದೆ ಎಂದು ತಿಳಿಸಿದ್ದಾರೆ.
 
 
ಕೇರಳದಲ್ಲಿ ಅಡಿಕೆ, ರಬ್ಬರ್ ಗೆ ರಾಜ್ಯ ಸರ್ಕಾರವೇ ಬೆಂಬಲ ಬೆಲೆ ನೀಡುತ್ತಿದೆ. ನಮ್ಮ ರಾಜ್ಯದಲ್ಲಿಯೂ ಈ ಕ್ರಮ ಜಾರಿಗೆ ಬರಬೇಕು. ಕೊಬ್ಬರಿಗೆ ಸದ್ಯ 6240 ರೂ. ಮಾತ್ರ ಬೆಂಬಲ ಬೆಲೆ ಇದೆ. ಕನಿಷ್ಟ 15 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು. ಈ ಬಗ್ಗೆ ಲೋಕಸಭೆಯ ಬಜೆಟ್ ಅಧಿವೇಶನದ ವೇಳೆ ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here