ಕೊಪ್ಪಳದ ಸಪ್ಪಳ!

0
391

ಮಸೂರ ಅಂಕಣ: ಆರ್ ಎಂ ಶರ್ಮ
ಈಗಷ್ಟೇ ಆಗಸ್ಟ್ ತಿಂಗಳ ತಾರಿಕು ೨೮, ೨೦೧೬ ರ ಪೂವಾ೯ಹ್ನ ೧೧ಘಂಟೆಗೆ ಆಕಾಶವಾಣಿಯಲ್ಲಿಸನ್ಮಾನ್ಯ ಪ್ರಧಾನ ಮಂತ್ರಿಗಳು-“ಶ್ರೀ ನಮೋ”-ತಮ್ಮ ೨೩ನೇ ಬಾರಿಯ
“ಮನ್ನ್ ಕೀ ಬಾತ್-ಮನದಾಳದ ಮಾತು”-ಪ್ರಸ್ತುತ ಪಡಿಸಿದ್ದು ಎಲ್ಲರಿಗೂ ತಿಳಿದದ್ದೇ.
ಅದರಲ್ಲಿ ಬಹಳ ಗಂಭೀರವಾದ ಒಂದು ಸಂಗತಿಯನ್ನು ಕೇಳುಗರ ಸಮಕ್ಷ ಇಟ್ಟರು-ಅದೇ ಮಲ್ಲಮ್ಮ ಎಂಬ ಹುಡುಗಿಯ ಜಯದ ಗಾಥೆ.
ಕೊಪ್ಪಳ ಜಿಲ್ಲೆ ಕನಾ೯ಟಕದ ಉತ್ತರಭಾಗದ ಪ್ರದೇಶದ ಒಂದು ಗ್ರಾಮ-“ಢಾಣಾಪುರ”-ಅಲ್ಲಿಯ ನಿವಾಸಿ ಮಲ್ಲಮ್ಮನ ಯಶೋಗಾಥೆ!
ಉಪವಾಸ-೩ ದಿನಗಳ ಸಶ್ರಮ ಹೋರಾಟ ಎಲ್ಲಾ ಅಹಂಕಾರಗಳ ಧೂಳೀಪಟ-ಸತ್ಯದ ಗೆಲುವು-ಪುಟಿಪುಟಿದು ಸುಳ್ಳುಗಳನ್ನು ಪುಡಿ ಪುಡಿ ಮಾಡಿದುದೇ ನಿತ್ಯಸತ್ಯ.
೧೦ನೇತರಗತಿಯಲ್ಲಿ ಓದುತ್ತಿರುವ ಹುಡುಗಿ-ಕಿರುಚಾಟವಿಲ್ಲ-ಹುಡುಗಾಟವಿಲ್ಲ-ಅಲೆದಾಟವಿಲ್ಲ-ಎಲ್ಲಾ ಇಲ್ಲದ-ಸಲ್ಲದ ಪ್ರಭುಗಳೂ ನತಮಸ್ತಕರಾಗಿ ಅವಳ ಸನ್ನಿಧಾನಕ್ಕೆ ಬಂದದ್ದೇ-ಜನಶಕ್ತಿಯ ಮೇರು ನಿದಶ೯ನವು.
ಧ್ಯೇಯ-ಗೇಯ-ಪ್ರಮೇಯ-ಒಂದೇ-ತನ್ನಮನೆಯಲ್ಲಿ-ಮನೆಮಂದಿಗೆಲ್ಲ ನಿರಾಳವೆನಿಸುವ ಸೌಕಯ೯-“ಶೌಚಾಲಯ-ಟಾಯ್ಲೆಟ್”-ಇದರ ನಿಮಾ೯ಣ.
ಹಳ್ಳಿ ಮನೆ-ಸೌಕಯ೯ವಿಲ್ಲದ ಕಾರಣ-ಬಯಲಿನ ಬಯಕೆ-ಇದೇ ಬವಣೆ-ಹೆಂಗಸರಿಗೆ ಮೇಲಾಗಿ ಮುಜುಗರ-ಆಗೆಲ್ಲಾ ಜೀವನ ದುಭ೯ರ-ಇಲ್ಲ ಪರಿಹಾರ-ಇದೇ ದಿನನಿತ್ಯದ ವ್ಯವಹಾರ-ವ್ಯಾಪಾರ-ಅಪಾರ ನೋವಿನ ಭಂಡಾರ.
ಇದು ಅನುಭವ ವೇದ್ಯ.
ಇದಕ್ಕೆ ತಕ್ಕ ಉತ್ತರ-
“ಇಛ್ಚಾ ಶಕ್ತಿ-ಕ್ರಿಯಾಶಕ್ತಿ-ಜ್ನಾ~ನಶಕ್ತಿ”-ಬಲವಾದ ಸುತ್ತಿಗೆ-ಇದರ ಪೆಟ್ಟು-ಕೆಟ್ಟದಕ್ಕೆ ಮದ್ದು-ಸದ್ದಿಗೆ ಸೆಡ್ಡುಹೊಡೆಯುವ ಗುದ್ದು.ಉ
ಜನಶಕ್ತಿಗೆ ಎದುರಾಗುವ-ಯುಕ್ತಿ-ಕುಯುಕ್ತಿ-ಎಲ್ಲಾದಕ್ಕೂ ಪರಮಮುಕ್ತಿ.
ಒಂದು ಜನ-ಹುಡುಗಿ-ಎಲ್ಲಾಬೆಡಗುಗಳನ್ನೂ-ಬೆಂಡಾಗಿಸಿ-ತುಂಡಾಗಿಸಿ ಮೆರದದ್ದೇ-ಪವಾಡವೇ?-ಕೈವಾಡವೇ?
ಆಯ೯ವಾಕ್ ಹೇಳುಅತ್ತದೆ-
“ಉದ್ಯೋಗ ಪುರುಷ ಸಿಹ್ಮಂ ಉಪೈತಿ ಲಕ್ಷ್ಮೀ”,
“ಸೋತ್ಸಾಹಾನಾಂ ನರಾಣಾಂ ನಾಸ್ತ್ಯಸಾಧ್ಯಂ”-
ತಾತ್ಪಯ೯ದಲ್ಲಿ-ಯಶಸ್ಸಿನ ಜಾಡು-ಕೆಲಸದಲ್ಲಿ ನೈಪುಣ್ಯತೆ-ತನ್ಮಯತೆ-ತಾದಾತ್ಮ್ಯ-ಅನುಸಂಧಾನ ಎಲ್ಲ ಗಲೀಜುಗಳನ್ನೂ ಝಾಡಿಸಿ ಶುಭ್ರ ವಿಜಯಕ್ಕೆ ಹರಿಕಾರ ಎಂತ.
ಇದೇಮಲ್ಲಮ್ಮ ಪವಾಡ-ಇಲ್ಲೇನಿದೆಗೂಢ?
ಗೋಡೆಗಳನ್ನು ಕೆಡೆದದ್ದೇಅವಿ-ಒಡವೆಗಳನ್ನು ಪದೆದದ್ದೇ ಪರಮಸತ್ಯ.
ಮನೆಯಲ್ಲಿ ಬಡತನ-ಯಾವ ಜತನಕ್ಕೂ ಒದಗದ ಒಣವಾದ-ಉಪವಾಸದಿಂದ ಹೈರಾಣವಾಗಿ-ಹಗುರವಾಯಿತು.
ಭಾರತದಲ್ಲಿ ಈಗ ಸ್ವಛ್ಚ ಭಾರತ ಒಂದು ಮಹಾನ್ ಅಭಿಯಾನ-ಮಾನ ಕಾಪಾಡುವ ದಿವಾನ-ಎಲ್ಲಾ ದುಃಖದುಮ್ಮಾನಗಳಿಗೆ ವಿದಾಯ-
ಆರೋಗ್ಯ-ಆಯುಷ್ಯ ಇವಕ್ಕೆ ಪೂರಕ-ಶೌಚಾಲಯ.
ಜನಕ್ಕೆ ಹಿತ-ಜನ್ಮಕ್ಕೆ ಹಿತ ಇನ್ನೆಲ್ಲಾ ಸದಾ ನಿರಾಳ-ನೆಮ್ಮದಿ.
ಹೆಣ್ಣು-ಹುಣ್ಣುಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹೊಲಸನ್ನು ಹೊಸ್ತಿಲಿನಿಂದ ಆಚೆಗೆ ಸರಿಸಿ ಸರಿಪಡಿಸಿದುದೇ ನಮೋ ರವರ ದೃಷ್ಟಿಗೆ ಸಂದು ಅವರದಕ್ಕೆ-
“ಭೂಯೋ ಭೂಯೋನಮಃ” ಎಂದರು.
ಮಹತ್ತಿಗೆ ಸಂಪತ್ತೇ-ವಿದ್ವತ್ತೇ -ಯಾವುದಕ್ಕೆ ಕಿಮ್ಮತ್ತು-ಇಲ್ಲಿಲ್ಲವೇ ಗಮ್ಮತ್ತು-ಗತ್ತು?
ಉಪವಾಸ ಸತ್ಯಾಗ್ರಹ-ಗ್ರಹಚಾರ ಬಿಡಿಸಿ ಮೋಕ್ಷನೀಡದೇ ಎಂದರೆ ಢಾಣಾಪುರದ ಮಲ್ಲಮ್ಮನ ಪವಾಡವೇ ಉತ್ತರ.
ಈ ಕೊಪ್ಪಳದ ಸಪ್ಪಳ-ಢಾಣಾಪುರದ ಢಣ ಢಣ-ಸೃಷ್ಟಿಸಿದ ತಲ್ಲಣ-ಆಳುವ ಪ್ರಭುತ್ವದ-ಅಪಕ್ವ-ಅಸತ್ಯ- ಅಸಹ್ಯ ಸಂಗತಿಗಳಿಗೆ-ಸಂಗಾತಿಗಳಿಗೆ ಗಾಳಹಾಕಿ ಗಂಟಲು ಕಟ್ಟಿಸಿತು.
ಎತ್ತರದ ಧನಿಯಲ್ಲಿ ಬಡಾಯಿಸಿ ಸ್ವಛ್ಚಭಾರತ ಅಭಿಯಾನದಲ್ಲಿ ಕನಾ೯ಟಕ ಮುಂಚೂಣಿಯಲ್ಲಿ ಎಂಬುದೆಲ್ಲ “ಟೊಳ್ಳು-ಬರಿಟೊಳ್ಳು” ಎಂತಸತ್ಯ ದಶ೯ನವನ್ನು ಮಾಡಿಸುದುದೇ ಮಲ್ಲಮ್ಮ ಪವಾಡದ ಕೊಡುಗೆ.
ಈ ಕೊಡುಗೆಗೆ ಅಡಿಗಡಿಗೆ ಕೈಮುಗಿಯುತ್ತಾ ಪ್ರಭು ಸಮುದಾಯ ಮುಗಿಬಿದ್ದು-ಜಿದ್ದು ಕೈಬಿಟ್ಟದ್ದುಊ ಪವಾದವೇ ಸರಿ.
ಮಲ್ಲಮ್ಮ ಎಲ್ಲ ಜನಮಾನಸದ ಮೆಚ್ಚುಗೆ ಗಳಿಸಿ ಮನದಾಳಕ್ಕೆ ಇಳಿದುದೇ ಸನ್ಮಾನ್ಯ-“ನಮೋ” ರವರ ಗಮನಸೆಳೆದು ಮಾನ್ಯವಾದುದೇ ಜನಶಕ್ತಿಯ ಗಳಿಕೆ.
ಪ್ರಭುಚಿತ್ತ ಚಿತ್ತೈಸಿ ಧನ್ಯವಾದುದೇ ಅಲ್ಲದೆ ಧನ್ಯವಾದ ಹೇಳಿ ಮುಗಿಸಿದುದೇ ಮಂಗಳಕರ.
ಕೊಪ್ಪಳದ ಸಪ್ಪಳ-ಧ್ವನಿಸಿ-ದನಿಗೂಡಿಸಿ ಮೆರೆದುದೇ ಧನ್ಯತೆ-ಅದಕ್ಕೆ ಧನ್ಯವಾದ್ದ ಹೇಳಿ ತೆಪ್ಪಗಾದುದೇ ಆಳುವ-ಅಳಲುವ ಪ್ರಭುತ್ವಕ್ಕೆ ಇದ್ದ ಏಕೈಕ ಮಾಗ೯.
ಜಡ್ಡು ಹಿಡಿದ,ಜಾಡ್ಯದ ಆಡಳಿತಕ್ಕೆ ಇಂತಹ ಸದ್ದು ಅಪ್ಪಳಿಸಿದರೆ ಕುಪ್ಪಳಿಸುವುದಕ್ಕೆ ಕೊನೆ.
ಪ್ರಧಾನಿಯವರ ದೃಷ್ಟಿ-ಮಾನ್ಯತೆ ಎಚ್ಚರದಗಂಟೆಯಾಗಿ ಎಲ್ಲಾ ಗಂಟುಗಳ ಮುಕ್ತಿಗೆ ಸರಿದಾರಿಯಾಯಿತು.
ದೂರದ ಹಳ್ಳಿ-ಹಳ್ಳಿಯ ಹುಡುಗಿ-ಬೆಡಗು ಬಿನ್ನಾಣಗಳಿಗೆ ಗುಡುಗು-ಪ್ರಧಾನಿಪ್ರವೇಶ-ದೇಶಕ್ಕೆ ಸಂದೇಶ-ವೇಷ ಕಳಚಿ ಕಾಯ೯ಪ್ರವೃತ್ತಿ-
ಇನ್ನೆಲ್ಲಾ ಸಂತೃಪ್ತಿ.
ಶೌಚಾಲಯ-ಸುಖಾಲಯಕ್ಕೂ-ದೇವಾಲಯಕ್ಕೂ ಲಾಯಖ್ಖು.
ಹೀಗಾದರೆ-ಸ್ವಛ್ಚತೆ-
“ಕ್ಲೆನಿನೆಸ್ಸ್ ನೆಕ್ಸ್ಟ್ ಟು ಗಾಡ್ಲಿನೆಸ್ಸ್”
ಇದು ಸತ್ಯವಾಗದೇನು?
ಸ್ವಛ್ಚ ಭಾರತ-ದೇವಭಾರತ-ಶ್ರೇಷ್ಟ ಭಾರತ ಇದಕ್ಕೆ ಎಲ್ಲೆಲ್ಲೂ-ಯಾವಾಗಲೂ-ಅನೇಕ ಮಲ್ಲಮ್ಮಗಳ ಸಾನ್ನಿಧ್ಯ ಬೇಕು-
ಅದು ಸಾಧ್ಯ-ಸಾಧು-ಸಿಂಧು.
ಅದಿರಲಿ ಇಂದು ಮುಂದು ಎಂದೆಂದೂ.
ಆರ್.ಎಂ.ಶರ್ಮ
[email protected]

LEAVE A REPLY

Please enter your comment!
Please enter your name here