ಕೊತ್ತಂಬರಿ ಪರಿಮಳದ ಈರುಳ್ಳಿ ಸೂಪ್

0
436

ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:

ಕತ್ತರಿಸಿದ ಈರುಳ್ಳಿ  (250 ಗ್ರಾಂ), ಕತ್ತರಿಸಿದ ಬೆಳ್ಳುಳ್ಳಿ  (5 ಗ್ರಾಂ), ಈರುಳ್ಳಿ ದಿಂಡು (10 ಗ್ರಾಂ), ಒಂದು ಲವಂಗದ ಎಲೆ, ನೀರು (700 ಮಿ.ಲೀ.), ಕ್ರೀಂ (40 ಎಂ.ಎಲ್‌.), ಬೆಣ್ಣೆ (50 ಗ್ರಾಂ), ಮೈದಾ (30 ಗ್ರಾಂ), ಉಪ್ಪು ರುಚಿಗೆ ತಕ್ಕಷ್ಟು.


ಮಾಡುವ ವಿಧಾನ

ದಪ್ಪ ತಳದ ಬಾಣಲಿ ತೆಗೆದುಕೊಂಡು ಅದರಲ್ಲಿ ಬೆಣ್ಣೆಯನ್ನು ಕರಗಿಸಿ. ಕತ್ತರಿಸಿದ ಬೆಳ್ಳುಳ್ಳಿ ತುಣುಕುಗಳು ಬಂಗಾರದ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ನಂತರ ಈರುಳ್ಳಿ, ಈರುಳ್ಳಿ ದಿಂಡು ಮತ್ತು ಲವಂಗದ ಎಲೆಯನ್ನು ಸೇರಿಸಿ ಮಿಶ್ರಣವನ್ನು ಬೆಣ್ಣೆ ಜಿಡ್ಡಿನಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಬಾಣಲೆಯನ್ನು ಮುಚ್ಚಿ ಮಿಶ್ರಣವು ಮೃದುವಾಗಿ, ಹಳದಿ ಬಣ್ಣಕ್ಕೆ ತಿರುಗವವರೆಗೆ ಹದವಾಗಿ ಬೇಯಿಸಿ. ಆಮೇಲೆ ಅದರಲ್ಲಿನ ಲವಂಗದ ಎಲೆಯನ್ನು ತೆಗೆದುಹಾಕಿ.


ಈಗ ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಹದವಾಗಿರುವ ಮಿಶ್ರಣವನ್ನು ಸುರಿದುಕೊಂಡು ಅದಕ್ಕೆ ನೀರು ಮತ್ತು ಎರಡು ಚಮಚ ಹಿಟ್ಟನ್ನು ಹಾಕಿ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಮಿಶ್ರಣ ಮೃದು ರೂಪಕ್ಕೆ ತಿರುಗುವವರೆಗೆ ಚೆನ್ನಾಗಿ ಕಲಕುತ್ತಾ ಹುರಿಯಿರಿ. ಆಮೇಲೆ ಒಂದು ಚಮಚ ಕ್ರೀಂ ಮತ್ತು ಬೆಣ್ಣೆ ಸೇರಿ ಹದವಾಗಿ ಮಸಾಲೆ ಕೊಟ್ಟರೆ ಸೂಪ್ರೆಡಿ. ಗಾರ್ಲಿಕ್ಬ್ರೆಡ್ನೊಂದಿಗೆ ಬಿಸಿಬಿಸಿಯಾಗಿ ಸವಿಯಲು ನೀಡಿ.

Advertisement

LEAVE A REPLY

Please enter your comment!
Please enter your name here