ಕೊಡ್ಲಿಪೇಟೆ-ಧರ್ಮಸ್ಥಳ ಬಸ್ಗೆ ಚಾಲನೆ

0
400

ಮಡಿಕೇರಿ ವರದಿ
ಕೊಡ್ಲಿಪೇಟೆ-ಧರ್ಮಸ್ಥಳ ನೂತನ ಮಾರ್ಗದ ಬಸ್ ಸಂಚಾರಕ್ಕೆ ಚಾಲನೆ ದೊರೆತ್ತಿದೆ. ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಕೊಡ್ಲಿಪೇಟೆಯಲ್ಲಿ ಬಸ್ಗೆ ಚಾಲನೆ ನೀಡಿ ಶುಭ ಹಾರೈಸಿದರು. ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾದ ಎಂ.ಎ.ಶೌಕತ್ ಆಲಿ, ಕೊಡ್ಲಿಪೇಟೆ ಗ್ರಾ.ಪಂ ಅಧ್ಯಕ್ಷರಾದ ಅನುಸೂಯ ದೇವರಾಜ್, ಸೋಮವಾರಪೇಟೆ ತಾ.ಪಂ ಅಧ್ಯಕ್ಷರಾದ ಪುಷ್ಪ ರಾಜೇಶ್, ಸದಸ್ಯರಾದ ಬಿ.ಬಿ.ಸತೀಶ್, ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷರಾದ ನಿರ್ಮಲ ಸುಂದರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್ ಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ.ಯಾಕುಬ್, ಪ್ರಮುಖರಾದ ಔರಂಗಜೇಬ್, ಹೊನ್ನಮ್ಮ, ಹೆಚ್.ಎಂ.ಅಬ್ಬಾಸ್, ಹನೀಫ್, ವೀರೇಂದ್ರ, ಮಲ್ಲೇಶ್, ಜನಾರ್ಧನ, ಡಾ.ಉದಯಕುಮಾರ್ ಹಾಗೂ ಕೊಡ್ಲಿಪೇಟೆ ಚೇಂಬರ್ ಆಫ್ ಕಾಮಸರ್್ನ ಪ್ರಮುಖರು ಈ ಸಂದರ್ಭ ಹಾಜರಿದ್ದರು.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಕೊಡ್ಲಿಪೇಟೆಯಿಂದ ಹೊರಡುವ ಕೆಎಸ್ಆರ್ಟಿಸಿ ಬಸ್ ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯ ಮಾರ್ಗವಾಗಿ ಶ್ರೀಮಂಜುನಾಥ ಸ್ವಾಮಿ ದೇವಾಲಯದ ಮಧ್ಯಾಹ್ನದ ಪೂಜೆ ವೇಳೆಗೆ ಧರ್ಮಸ್ಥಳ ತಲುಪಲಿದೆ. ನಂತರ ಧರ್ಮಸ್ಥಳದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ರಾತ್ರಿ 7.30 ಕ್ಕೆ ಕೊಡ್ಲಿಪೇಟೆ ತಲುಪಲಿದೆ ಎಂದು ನಿರ್ದೇಶಕರಾದ ಎಂ.ಎ.ಶೌಕತ್ ಆಲಿ ತಿಳಿಸಿದರು.

LEAVE A REPLY

Please enter your comment!
Please enter your name here