ಕೊಡಗಿನಲ್ಲಿ ಮಳೆ: ಪಯಸ್ವಿನಿಯಲ್ಲಿ ಹೆಚ್ಚಿದ ಹರಿವು

0
360

ದ.ಕ.ಪ್ರತಿನಿಧಿ ವರದಿ
ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಅಲ್ಪಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಗೆ ನೀರು ಹರಿದು ಬಂದಿದೆ.
 
 
ಈ ಹಿನ್ನೆಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡುವ ತಾತ್ಕಾಲಿಕ ಒಡ್ಡಿನಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಈ ಹಿಂದೆ ನದಿ ನೀರಿನ ಹರಿವು ಸ್ಥಗಿತಗೊಂಡ ಕಾರಣ ನೀರು ಸರಬರಾಜು ಮಾಡುವ ನೀರಿನ ಒಡ್ಡು ಬರಡಾಗಿತ್ತು. ಕೇವಲ ಎರಡು ದಿನಕ್ಕೆ ಬೇಕಾಗುವಷ್ಟು ಮಾತ್ರ ನೀರಿದ್ದ ಕಾರಣ ಆತಂಕ ಸೃಷ್ಠಿಯಾಗಿತ್ತು.
 
 
ಆದರೆ ಕೊಡಗಿನಲ್ಲಿ ಮಳೆಯಾದ ಕಾರಣ ಈ ಆತಂಕ ದೂರವಾಗಿ, ಇದೀಗ ಒಡ್ಡಿನಲ್ಲಿ ಸುಮಾರು ಎರಡು ಅಡಿಯಷ್ಟು ನೀರು ಸಂಗ್ರಹಗೊಂಡಿದೆ.
ಕೊಡಗಿನ ಬೆಟ್ಟ-ಗುಡ್ಡಗಳಲ್ಲಿ ಮಳೆಯಾಗಿರುವುದು ಮತ್ತು ಪಯಸ್ವಿನಿ ನದಿಯಿಂದ ಕೃಷಿಗೆ ನೀರನ್ನು ಪಂಪು ಮಾಡುವುದನ್ನು ಕಡಿತ ಮಾಡಿದ ಕಾರಣ ನದಿಯಲ್ಲಿ ಅಲ್ಪ ಪ್ರಮಾಣದ ನೀರು ಹರಿಯಲು ಪ್ರಾರಂಭವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here