ಕೊಡಗಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

0
251


ನಮ್ಮ ಪ್ರತಿನಿಧಿ ವರದಿ

ಕೊಡಗಿನಲ್ಲಿ ವಿದೇಶದಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ಅನೀಸ್ ಕನ್ಮನಿಜಾಯ್ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದುಬೈಯಿಂದ ಬಂದ 35 ವರ್ಷದ ವ್ಯಕ್ತಿಯು ಮಡಿಕೇರಿ ತಾಲೂಕಿನ ಕೊಂಡಗೇರಿ ಗ್ರಾಮದವನಾಗಿದ್ದು, ಈತನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಕೊರೋನಾ ಎದುರಿಸಲು ಹಾಗೂ ತಡೆ-ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದೆ. ಮುಂಜಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144/3 ಸೆಕ್ಷನ್ ಜಾರಿ ಮಾಡಲಾಗಿದೆ ಎಂದರು.

Advertisement

ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. 100 ಬೆಡ್ ಯುಳ್ಳ ಐಸೋಲೇಟೆಡ್ ವಾರ್ಡ್, ಕೋರೆಂಟಲ್ 150 ಬೆಡ್ ಗಳ ಮತ್ತೊಂದು ವಾರ್ಡ್ ರೆಡಿ ಮಾಡಲಾಗಿದೆ.

ಪ್ರವಾಸಿಗಳ ತಾಣಗಳ ಸ್ಟೇ ಬುಕ್ಕಿಂಗ್ ಗಳನ್ನು ರದ್ದು ಮಾಡಲಾಗಿದೆ. ನಿತ್ಯದ ಧಾರ್ಮಿಕ ಕಾರ್ಯಕ್ರಮ ಬಿಟ್ಟು ಬೇರೆ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಲಾಗಿದೆ. ಮೆಡಿಕಲ್, ದಿನಸಿ-ತರಕಾರಿ ಅಂಗಡಿಗಳನ್ನು ಬಿಟ್ಟು, ಅಂಗನವಾಡಿ-ಶಾಲೆ-ಕಾಲೇಜು, ಸಂತೆ, ಜಾತ್ರೆ ಸೇರಿ ಸಾರ್ವಜನಿಕರು ಸೇರುವ ಪ್ರದೇಶಗಳನ್ನು ಬಂದ್ ಮಾಡುವಂತೆ ಡಿಸಿ ಸೂಚಿಸಿದ್ದಾರೆ.

ಕರೋನ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯ ಗಡಿಪ್ರದೇಶಗಳಲ್ಲಿ ಚೆಕ್ ಪೋಸ್ಟ್ ತೆರೆದು ಪರಿಶೀಲನೆ ನಡೆಸಲಾಗುತ್ತಿದೆ


ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿದ್ದು, ಖಾಸಗಿ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಡಿಕ್ಲೇರ್ ಮಾಡುವಂತೆ ಡಿಸಿ ಸೂಚಿಸಿದ್ದಾರೆ. ಇದರೊಂದಿಗೆ ಗರ್ಭಿಣಿ ಹಾಗೂ ಆರೋಗ್ಯ ಸಮಸ್ಯೆ ಇರುವ ಸರ್ಕಾರಿ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆ.

ಬಸ್-ವಿಮಾನ ಪತ್ತೆ ಮಾಡಿದ ಜಿಲ್ಲಾಡಳಿತ

ಕೊಡಗು ಜಿಲ್ಲೆಯ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ಪ್ರಯಾಣಿಸಿದ ಬಸ್, ವಿಮಾನವನ್ನು ಕೊಡಗು ಜಿಲ್ಲಾಡಳಿತ ಪತ್ತೆ ಮಾಡಿದೆ. ರೋಗಿಯು ದುಬೈಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಂಡಿಗೋ 6ಇ96 ವಿಮಾನದಲ್ಲಿ ಸಂಜೆ 4.15ಕ್ಕೆ ಬಂದಿದ್ದು, ಮಾರ್ಚ್ 16ರ ಬೆಳಗ್ಗೆ ರಾಜಹಂಸ ಕೆಎ 19 ಎಫ್ 3170 ಬಸ್ ಬೆಂಗಳೂರಿನಿಂದ ಮೂರ್ನಾಡ್ ಗೆ ಆಗಮಿಸಿದ್ದ. ಹೀಗಾಗಿ
ಬಸ್, ವಿಮಾನದಲ್ಲಿ ಬಂದವರಿಗೂ ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ ತಪಾಸಣೆಗೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here