ಕೈಬಿಟ್ಟ ನಿಡ್ಡೋಡಿ ಯೋಜನೆ

0
350

ಮೂಡುಬಿದಿರೆ: ನಿಡ್ಡೋಡಿಯಲ್ಲಿ ಯುಎಂಪಿಪಿ ಯೋಜಜನೆಯ ಪ್ರಸ್ತಾವನೆಯನ್ನು ಕೈ ಬಿಟ್ಟಿರುವುದಾಗಿ ಪವರ್‌ ಕಂಪೆನಿ ಆಫ್‌ ಕರ್ನಾಟಕ ಲಿಮಿಟೆಡ್‌ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿಗೆ ಲಿಖಿತ ಭರವಸೆಯ ಪತ್ರವನ್ನು ಕಳುಹಿಸಿದೆ. ಇದರಿಂದಾಗಿ ನಿಡ್ಡೋಡಿ ಪರಿಸರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿ , ಕಲ್ಲಮುಂಡ್ಕೂರು ೨೬-೨-೨೦೧೩ರಂದು ಕರ್ನಾಟಕ ಸರಕಾರಕ್ಕೆ ಇ ಜನಸ್ಪಂದನಾ ವ್ಯವಸ್ಥೆಯಡಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ.  ಕರ್ನಾಟಕದಲ್ಲಿ ಯು ಎಂ ಪಿ ಪಿ ಯೋಜನೆಯ ಸ್ಥಾಪನೆಗಾಗಿ ನಿಡ್ಡೋಡಿ ಎಂಬ ಗ್ರಾಮದಲ್ಲಿ ಜಾಗವನ್ನು ಗುರುತಿಸಲಾಗಿದ್ದರೂ ನಾನಾ ಕಾರಣಗಳಿಂದ ಹಾಗೂ ಯೋಜನೆಗೆ ಬೇಕಾದ ಭೂ ಪ್ರದೇಶವನ್ನು ಸ್ವಾಧೀನಗೊಳಿಸಲಾಗದ್ದರಿಂದ ಈ ಯು ಎಂ ಪಿ ಪಿ ಯೋಜನೆಯು ಕಾರ್ಯಗತವಾಗಿರುವುದಿಲ್ಲ. ಈ ಸಂಬಂಧ ಕೇಂದ್ರ ಸರಕಾರವು ಸದರಿ ಯೋಜನೆಯ ಬಗ್ಗೆ ಕರ್ನಾಟಕ ಸರಕಾರ ಇಂಧನ ಇಲಾಖೆಯಿಂದ ವರದಿಯನ್ನು  ಕೇಳಿದ್ದು ತತ್ಸಂಬಂಧವಾಗಿ ಇಂಧನ ಇಲಾಖೆಯು ದಿನಾಂಕ ೧೫-೪-೨೦೧೯ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ತಿಳಿಸಿದೆ.

ಸಂತಸ ತಂದಿದೆ: ಯೋಜನೆ ಸ್ಥಗಿತಗೊಂಡಿರುವುದು ನಿಜಕ್ಕೂ ಸಂತಸದ ವಿಚಾರ. ಇದಕ್ಕೆ ಮಾಧ್ಯಮವೂ ಸೇರಿದಂತೆ ಸರ್ವರ ಸಹಕಾರ ಕಾರಣವಾಗಿದೆ. ಇದಕ್ಕಾಗಿ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇವೆ. ಈ ಭಾಗದ ಎಲ್ಲಾ ಜನತೆ ಸೇರಿಕೊಂಡು ದೊಡ್ಡ ವಿಜಯೋತ್ಸವ ನಡೆಸಲುದ್ದೇಶಿಸಿದ್ದೇವೆ. ಕೊರೊನೋ ಹಿನ್ನಲೆಯಲ್ಲಿ ದಿನ ನಿಗಧಿ ಮಾಡಿಲ್ಲ. ಅದೇ ರೀತಿ ಹರಕೆ ಯಕ್ಷಗಾನ ಸೇವೆಯನ್ನೂ ತೀರಿಸುತ್ತೇವೆ.

ಆಲ್ಫೋನ್ಸ್‌ ನಿಡ್ಡೋಡಿ

ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿ

LEAVE A REPLY

Please enter your comment!
Please enter your name here