ಕೈಗಾರಿಕಾ ಅಧ್ಯಯನ

0
204

ಪುತ್ತೂರು ಪ್ರತಿನಿಧಿ ವರದಿ
ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕೈಗಾರಿಕಾ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಕೆಎಂಎಫ್ ಮಿಲ್ಕ್ ಡೈರಿ ಮತ್ತು ಹಿಂದುಸ್ಥಾನ್ ಯೂನಿಲೆವರ್ ಸಂಸ್ಥೆಗಳಿಗೆ ಭೇಟಿ ನೀಡಿದರು.
 
 
 
ಕೆಎಂಎಫ್ ಸಂಸ್ಥೆಯ ಮನೋಜ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸ್ಥಾಪನೆ, ಆಡಳಿತ ವ್ಯವಸ್ಥೆ, ಹಾಲು ಉತ್ಪಾದನೆ, ಹಾಲು ಸಂಗ್ರಹ, ಹಾಲು ಶೇಖರಣೆಯ ವಿಧಾನ, ಹಾಲಿನ ಪ್ಯಾಕೆಟ್ ಗಳ ತಯಾರಿ, ಹಾಲಿನ ಇತರ ಉತ್ಪನ್ನಗಳು ಮುಂತಾದವುಗಳ ಕುರಿತು ಮಾಹಿತಿ ನೀಡಿದರು.
 
 
 
ಹಿಂದುಸ್ಥಾನ್ ಯೂನಿಲೆವರ್ ಸಂಸ್ಥೆಯ ಸಿಬ್ಬಂದಿಗಳಾದ ಪೀಟರ್ ಆ್ಯಂಟನಿ ಮತ್ತು ಉದಯ ಕುಮಾರ್ ಫಟಕದ ಆಡಳಿತ ವ್ಯವಸ್ಥೆ, ಬಂಡವಾಳ ಹೂಡಿಕೆ, ಕಚ್ಛಾ ವಸ್ತುಗಳ ಪೂರೈಕೆ, ಉತ್ಪಾದನಾ ತಂತ್ರಜ್ಞಾನ, ಕಾರ್ಮಿಕರ ಸಮಸ್ಯೆಗಳು, ಮಾರುಕಟ್ಟೆಯ ವ್ಯವಸ್ಥೆ ಮುಂತಾದವುಗಳ ಕುರಿತು ವಿವರಿಸಿದರು.
 
 
ಈ ಅಧ್ಯಯನ ಕಾರ್ಯಕ್ರಮದಲ್ಲಿ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉಪನ್ಯಾಸಕರಾದ ಮಹಿತಾ ಕುಮಾರಿ ಎಮ್, ಸಂಧ್ಯಾ ಎಚ್ ಮತ್ತು ಪ್ರದೀಪ್ ಕೆ ಎಸ್ ಸಂಯೋಜಿಸಿದರು.

LEAVE A REPLY

Please enter your comment!
Please enter your name here