ಕೈ(ಕು)ತಂತ್ರ!

0
321

ಮುಂಬೈಗೆ ಶಿಫ್ಟ್ ಆದ್ರು ಶಾಸಕರು!
ಪೊಲಿಟಿಕಲ್ ಬ್ಯುರೋ – ವಾರ್ತೆ.ಕಾಂ
ಅಯ್ಯೋ ಒಂದಷ್ಟೂ ನೈತಿಕತೆಯೇ ಇಲ್ವೇ…? ಈ ಪ್ರಶ್ನೆ ಪ್ರತೀ ಚುನಾವಣೆಯ ಸಂದರ್ಭದಲ್ಲೂ ಉದ್ಭವಿಸುತ್ತಲೇ ಇರುತ್ತದೆ. ಒಂದೆಡೆ ಪಕ್ಷಾಂತರವಾದರೆ ಮತ್ತೊಂದೆಡೆ ಪಕ್ಷೇತರರನ್ನು ರಕ್ಷಿಸುವ ತಮ್ಮತ್ತ ಆಕರ್ಷಿಸುವ ತಂತ್ರಗಾರಿಕೆ…ಇನ್ನೊಂದೆಡೆ `ಆಪರೇಷನ್’ ಹೀಗೆ ಹಲವು ರೀತಿಯ ತಂತ್ರಗಾರಿಕೆ, ಕುತಂತ್ರಗಾರಿಕೆಗಳು ನಡೆಯುತ್ತಿರುತ್ತವೆ.
ಇದೀಗ ರಾಜ್ಯಸಭೆ ಚುನಾವಣೆಯ ಹಿನ್ನಲೆಯಲ್ಲಿ ಶಾಸಕರ ಕುದುರೆ ವ್ಯಾಪಾರಾ ವ್ಯಾಪಕವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಪಕ್ಷೇತರ ಶಾಸಕರನ್ನು ರಕ್ಷಿಸುವ ಹಾಗೂ ಅವರನ್ನು ಸೇಫ್ ಆಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಮುಂಬೈಗೆ ಶಿಫ್ಟ್ ಮಾಡುವ ಮಹತ್ಕಾರ್ಯವನ್ನು ಆಡಳಿತಾರೂಢ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಪಕ್ಷೇತರ-ಪಕ್ಷದ ಒಟ್ಟು 14ಶಾಸಕರು ಮುಂಬೈನ ಪಂಚತಾರಾ ಹೊಟೇಲ್ ನಲ್ಲಿ ತಂಗಿದ್ದಾರೆ. ಪಕ್ಷೇತರ ಶಾಸಕರಾದ ವರ್ತೂರು ಪ್ರಕಾಶ್‌, ಎಸ್‌.ಎನ್‌.ಸುಬ್ಟಾರೆಡ್ಡಿ, ಸತೀಶ್‌ ಸೈಲ್‌, ಮಂಕಾಳ ಸುಬ್ಬ ವೈದ್ಯ, ಎಂಇಎಸ್‌ನ ಅರವಿಂದ ಪಾಟೀಲ್‌, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ, ಕೆಜೆಪಿಯ ಬಿ.ಆರ್‌.ಪಾಟೀಲ್‌ ಇದೀಗ ಮುಂಬೈನಲ್ಲಿದ್ದಾರೆ. ತನ್ಮೂಲಕ ಇತರ ಪಕ್ಷಗಳು ಈ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳದಂತೆ ಕಾಂಗ್ರೆಸ್ ಕುಟಿಲ ತಂತ್ರ ರೂಪಿಸಿದೆ.

LEAVE A REPLY

Please enter your comment!
Please enter your name here