ಕೇರಳ ಮರಳು ಸಮಸ್ಯೆಗೆ ಪ್ರಧಾನಿ ಕಾರ್ಯಾಯದಿಂದ ಸ್ಪಂದನೆ

0
386

 
ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಕೇರಳದ ಪ್ರಧಾನ ಸಮಸ್ಯೆಯಾಗಿರುವ ಮರುಳು ಲಭ್ಯತೆಯ ಬಗ್ಗೆ ಇರುವ ಸಮಸ್ಯೆಯನ್ನು ಅದಷ್ಟು ಕೂಡಲೆ ನಿವಾರಿಸಬೇಕು ಎಂದು ಪ್ರಧಾನಿ ಕಾರ್ಯಾಲಯ ಕೇರಳ ಸರಕಾರಕ್ಕೆ ಪತ್ರ ಬರೆದಿದೆ.
 
 
ಈ ಬಗ್ಗೆ ಕೈಗೊಂಡ ವಿವರವನ್ನು ದೂರುದಾರರಾದ ಬದಿಯಡ್ಕದ ಅನ್ನಪೂರ್ಣ ಹೋಟೇಲ್ ಸೂರ್ಯನಾರಾಯಣ ಎಂಬವರಿಗೂ ಪ್ರಧಾನಿ ಕಚೇರಿಗೂ ಸಮಸ್ಯೆ ಪರಿಹಾರಕ್ಕಾಗಿ ತೆಗೆದ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ನೀಡಬೇಕು ಎಂದು ಪ್ರಧಾನಿ ಕಾರ್ಯಾಲಯವು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರಮುಖೇನ ತಿಳಿಸಿದೆ.
 
 
 
ಕೇರಳದ ಮರಳು ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವಾಲಯ ತುರ್ತಾಗಿ ಕೇರಳ ಸರಕಾರಕ್ಕೆ ಪತ್ರ ರವಾನಿಸಿದೆ.
ಕೇರಳದಲ್ಲಿ ಕಟ್ಟಡ ನಿರ್ಮಾಣಕಾರರು, ಮನೆ, ವಾಣಿಜ್ಯ ಸಂರ್ಕೀಣಗಳ ಕಟ್ಟಡಗಳ ಮರಳಿನ ಅಭಾವದಿಂದ ತುಂಬಾ ತೊಂದರೆಯಾಗುತ್ತದೆ. ಸಾಮಾನ್ಯ ಹಾಗೂ ಬಡ ವರ್ಗದ ಜನರಿಗೆ ಮನೆ ನಿರ್ಮಾಣಕ್ಕೆ, ಗುಡಿಸಲು, ಶೌಚಾಲಯ, ಮೂತ್ರಾಲಯ, ಮನೆ ಕಟ್ಟಲು, ಕೊಟ್ಟಗೆ ನಿರ್ಮಿಸಲು, ಕೃಷಿ ಸಂಬಂಧಿತ ಕಟ್ಟಡ ನಿರ್ಮಾಣಕಾರರು, ವಾಣಿಜ್ಯ ಸಂಕೀರ್ಣ ಹಾಗೂ ಇನ್ನಿತರ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳು ಮರಳು ಅಲಭ್ಯತೆಯ ಸಮಸ್ಯೆಯಿಂದಾಗಿ ಅರ್ಧದಲ್ಲಿ ನಿಂತಿದೆ.
 
 
 
ಕಾರ್ಮಿಕರು ಕೆಲಸಗಳಿಲ್ಲದೇ ಅನ್ಯ ಕೆಲಸಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಕಟ್ಟಡ ಮರಳಿನ ಪರವಾನಿಗೆ ಪಡೆದ ವ್ಯಾಪಾರಿಗಳು, ಮರಳು ಗಣಿಗಾರಿಕೆಯ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಿ ಮರಳು ಪೂರೈಕೆಯಾಗುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಯಾವಾಗ ಮರಳು ದೊರೆಯಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಇದರಿಂದ ಕೇರಳ ರಾಜ್ಯದಲ್ಲಿ ನಗರ ಮತ್ತು ಹಳ್ಳಿ ಹಾಗೂ ಗ್ರಾಮೀಣ ಪ್ರದೇಶದ ಕಟ್ಟಡ ನಿರ್ಮಾಣ ಕೆಲಸವೇ ಸ್ಥಗಿತವಾಗಿದೆ. ಕೇರಳ ರಾಜ್ಯ ಸರಕಾರ ಈ ದಿಸೆಯಲ್ಲಿ ಯಾವುದೇ ಗಮನ ಹರಿಸಿದೇ ಸೂಕ್ತ ಕ್ರಮವನ್ನು ಕೈಗೊಂಡಿಲ್ಲದಿರುವುದು ದೌರ್ಭಾಗ್ಯಕರ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
 
 
 
ಕೇವಲ ಹತ್ತು ಸಾವಿರದೊಳಗೆ ಲಭಿಸುತ್ತಿದ್ದ ಒಂದು ಲೋಡು ಮರಳು ಇದೀಗ ಅದರ ಆರು ಪಟ್ಟು ಹೆಚ್ಚು ಕೊಟ್ಟರೂ ಲಭಿಸುತ್ತಿಲ್ಲ. ತನ್ಮೂಲಕ ಕೇರಳ ಸರಕಾರವು ಪರೋಕ್ಷವಾಗಿ ಅಕ್ರಮ ಮರುಳುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಇದು ಭಷ್ಟಾಚಾರಕ್ಕೂ ದಾರಿಯಾಗಿದೆ. ಅಕ್ರಮ ಮರಳುಗಾರಿಕೆಯಿಂದಾಗಿ ಕೇರಳ ಸರಕಾರವು ಹೇರಿರುವ ಅನಾರೋಗ್ಯಕರ ಕಾನೂನಿನಿಂದಾಗಿ ಕೇರಳದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅನ್ಯರಾಜ್ಯದ ಗಡಿ ಪ್ರದೇಶಗಳಿಂದ ಅಕ್ರಮ ಮರಳು ಸಾಗಾಟ ದಂಧೆಯು ಭಯಾನಕವಾಗಿ ಬೆಳೆಯುತ್ತಿದೆ. ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಕಾರ್ಯವು ಬಡ ಜನರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
 
 
ಈ ಬಗ್ಗೆ ಸಹಿ ಮಾಡಿದ ಮನವಿಗೆ ಪ್ರಧಾನಿ ಕಚೇರಿಯಿಂದ ಸ್ಪಂಧನೆ ಲಭಿಸಿದ್ದು, ಕೇರಳ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಕೈಗೊಂಡು, ಇದರ ಮಾಹಿತಿಯನ್ನು ದೂರುದಾರರಿಗೂ ಅದರ ಪ್ರತಿಯನ್ನು ಪ್ರಧಾನಿ ಕಚೇರಿಗೂ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here