ಕೇರಳದಲ್ಲಿ ಈ ಬಾರಿ ಎನ್‌ ಡಿ ಎ ಮುನ್ನಡೆ – ಉಮಾನಾಥ್‌ ಕೋಟ್ಯಾನ್

0
3677
ಕೇರಳದಲ್ಲಿ ಉಮಾನಾಥ್‌ ಕೋಟ್ಯಾನ್‌ ರಿಂದ ಪ್ರಚಾರ ಕಾರ್ಯ ನಡೆಯಿತು


ಮೂಡುಬಿದಿರೆ: ಕೇರಳ ಕೋಯಿಕ್ಕೋಡ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರ ಕಾರ್ಯ ನಡೆಸುತ್ತಿರುವ ಮುಲ್ಕಿ ಮೂಡುಬಿದಿರೆ ಕ್ಷೇತ್ರ ಶಾಸಕ ಉಮಾನಾಥ್‌ ಕೋಟ್ಯಾನ್‌ ಜನರ ಒಲವು ಬಿಜೆಪಿ ಕಡೆಯಿದೆ. ರಾಷ್ಟ್ರ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಸಾಧನೆ ಹಾಗೂ ಭಾರತೀಯ ಜನತಾ ಪಕ್ಷದ ಸ್ಪಷ್ಟ ಗುರಿ ಯೋಜನೆ ಯೋಚನೆಗಳು ಜನತೆಗೆ ಅರ್ಥವಾಗಿದ್ದು ಬದಲಾವಣೆಯನ್ನು ಬಯಸಿದ್ದಾರೆ ಎಂದು ʻವಾರ್ತೆ.ಕಾಂ ಗೆ ತಿಳಿಸಿದ್ದಾರೆ.

ಕೋಯಿಕ್ಕೋಡ್ ಉತ್ತರದ ಚುನಾವಣಾ ಉಸ್ತುವಾರಿ ಹಾಗೂ ಮೂಲ್ಕಿ ಮೂಡುಬಿದಿರೆಯ ಶಾಸಕರಾದ ಮಾನ್ಯ ಉಮನಾಥ್ ಕೋಟ್ಯಾನ್ ವಾರ್ತೆಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಪ್ರಮುಖ ವ್ಯಕ್ತಿಗಳ ಮನೆ ಭೇಟಿ ನಡೆಸಿ ವೈಯಕ್ತಿಕವಾಗಿ ಮತಯಾಚನೆ ನಡೆಸಿರುವುದಾಗಿ ತಿಳಿಸಿದರಲ್ಲದೆ ಕ್ಷೇತ್ರದಲ್ಲಿ ಎನ್‌ ಡಿ ಎ ಅಭ್ಯರ್ಥಿಯಾಗಿ ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್‌ ಕಣಕ್ಕಿಳಿದಿದ್ದು ಅವರೊಬ್ಬ ಸಮರ್ಥ ನಾಯಕ ಎಂಬ ಮಾತು ಜನಸಾಮಾನ್ಯರಿಂದ ವ್ಯಕ್ತವಾಗುತ್ತಿದೆ ಎಂದರು.


ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸಮರ್ಥವಾಗಿ ಮಾಡಿದ್ದು ಈ ಭಾಗದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದ ಅವರು, ದೇವರ ನಾಡೆಂಬ ಖ್ಯಾತಿಯ ಕೇರಳದಲ್ಲಿ ಈಗಾಗಲೇ ಎಲ್‌ ಡಿ ಎಫ್‌ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ ಎಂದರು. ಯುಡಿಎಫ್‌ ಹಾಗೂ ಎಲ್‌ ಡಿ ಎಫ್‌ ನಿಂದ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ಶಾಸಕ ಉಮಾನಾಥ್‌ ಕೋಟ್ಯಾನ್‌ ಹೇಳಿದರು.

LEAVE A REPLY

Please enter your comment!
Please enter your name here