ಕೇಮಾರು ಕ್ಷೇತ್ರದಲ್ಲಿ ಅಷ್ಟಮಂಗಲಕ್ಕೆ ಮುಹೂರ್ತ ಫಿಕ್ಸ್…‌

0
1399


ನಾಳೆ ನಡೆಯಲಿದೆ ಅಷ್ಟಮಂಗಲ ಪ್ರಶ್ನೆ…ಕುತೂಹಲಕ್ಕೆ ಕಾರಣವಾಯ್ತು ಈ ನಡೆ…

ಮೂಡುಬಿದಿರೆ: ಅತ್ಯಂತ ಸರಳ ಸ್ವಾಮೀಜಿ…ನೇರ ನಡೆನುಡಿಯ ಶ್ರೀ ಎಂದೇ ಖ್ಯಾತಿ ಪಡೆದ ಮೂಡುಬಿದಿರೆ ಸಮೀಪದ ಕುಗ್ರಾಮ ಕೇಮಾರಿನಲ್ಲಿರುವ ಪ್ರಭಾವೀ ಸರಳ ವ್ಯಕ್ತಿತ್ವದ ಈಶವಿಠಲ ದಾಸ ಸ್ವಾಮೀಜಿಯವರು ತಮ್ಮ ಸಾಂದೀಪನೀ ಸಾಧನಾಶ್ರಮದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಮುಹೂರ್ತ ಫಿಕ್ಸ್‌ ಮಾಡಿದ್ದಾರೆ. ಈಗಾಗಲೇ ಎರಡು ದಶಕಗಳಿಂದಲೂ ಅಧಿಕ ಸಮಯದಿಂದ ತಮ್ಮ ನಿರಂತರ ಅನುಷ್ಠಾನ, ಸಾಲಿಗ್ರಾಮ ಪೂಜೆ ಹಾಗೂ ಸರಳ ಜೀವನದ ಮೂಲಕ ಮನೆಮಾತಾಗಿರುವ ಕೇಮಾರು ಶ್ರೀ ಕ್ಷೇತ್ರದಲ್ಲಿ ಕೇರಳ ಮೂಲಕ ಜ್ಯೋತಿಷ್ಯ ವಿದ್ವಾನ್‌ ರನ್ನು ಆಹ್ವಾನಿಸಿ ಅಷ್ಟಮಂಗಲ ಪ್ರಶ್ನೆಗೆ ಮುಹೂರ್ತ ಫಿಕ್ಸ್‌ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಕುಗ್ರಾಮವಾಗಿದ್ದ ಕೇಮಾರಿನಲ್ಲಿ ತಮ್ಮ ಸ್ವಂತ ಶ್ರಮದಿಂದ ಆಶ್ರಮ, ದೇಗುಲವನ್ನು ನಿರ್ಮಿಸಿ ನಿರಂತರ ಅನುಷ್ಠಾನ, ಪೂಜೆ ನೆರವೇರಿಸುತ್ತಾ ತಮ್ಮ ಪ್ರಖರ ಮಾತಿನ ಶೈಲಿಯ ಮೂಲಕ ಅಪರಾ ಅಭಿಮಾನಿಗಳನ್ನು ಹಾಗೂ ಭಕ್ತರನ್ನು ಹೊಂದಿರುವ ಶ್ರೀಗಳು ಇದೀಗ ದೇಗುಲದಲ್ಲಿ ಪ್ರಶ್ನೆ ಚಿಂತನೆಗೆ ಮುಂದಾಗಿದ್ದು ವಿಪರ್ಯಾಸವೇ ಸರಿ.
ಕೇರಳ ಮೂಲದ ಅತ್ಯಂತ ಪ್ರಸಿದ್ಧ ಜ್ಯೋತಿಷ್ಯ ವಿದ್ವಾನ್‌ ಚೆರುಕ್ಕುನ್ನು ಸುಭಾಷ್‌ ನೇತೃತ್ವದ ತಂಡ ಅಷ್ಟಮಂಗಲ ಪ್ರಶ್ನೆ ಯಿರಿಸಿ ವಿಮರ್ಶೆ ನಡೆಸಲು ಕ್ಷೇತ್ರಕ್ಕಾಗಮಿಸಿದ್ದಾರೆ. ಮೂಡುಬಿದಿರೆಗೆ ಬುಧವಾರ ಆಗಮಿಸಿದ ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಈಗಾಗಲೇ ಮೂಡುಬಿದಿರೆ ಜೈನಮಠ, ಮೂಡುಬಿದಿರೆಯ ಐತಿಹಾಸಿಕ ಪ್ರಸಿದ್ಧಿಯ ಸಾವಿರ ಕಂಬದ ಬಸದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕೆಂದಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಇನ್ನಷ್ಟು ಮಾಹಿತಿ… : ಜ್ಯೋತಿಷಿಗಳು ಜ್ಯೋತಿಷ್ಯ ಶಾಸ್ತ್ರಗಳ ಬಗ್ಗೆ ಸಮಾಜದಲ್ಲಿ ಅನೇಕಾನೇಕ ಸಂದೇಹಗಳು, ಊಹಾಪೋಗಳು ಇಂದಿವೆ. ಅಕ್ಷರಶಃ ಸತ್ಯವಾದವಿಚಾರ. ಅಷ್ಟಮಂಗಲ ಪ್ರಶ್ನೆಯ ಬಗ್ಗೆಯೂ ಸಾಕಷ್ಟು ಗೊಂದಲಗಳು ಸಮಾಜದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಎಲ್ಲಾ ಗೊಂದಲಗಳಿಗೆ ಸೂಕ್ತ ಉತ್ತರವನ್ನು ಇದೇ ಜ್ಯೋತಿಷ್ಯ ವಿದ್ವಾನ್‌ ಈವಾಹಿನಿಯ ಮೂಲಕ ಸಮಾಜಕ್ಕೆ ತಿಳಿಸಲಿದ್ದಾರೆ. ಈ ಎಲ್ಲಾ ಮಾಹಿತಿಗಳ ವಿಶೇಷ ಸಂಚಿಕೆ ನಮ್ಮ ಓದುಗರಿಗೆ, ವೀಕ್ಷಕರಿಗಾಗಿ ನಾವು ನೀಡಲಿದ್ದೇವೆ. ನಿರೀಕ್ಷಿಸಿ…

ನಮ್ಮ ಸಹ ಸಂಸ್ಥೆ ʻಕಾಲ ವಾಹಿನಿʼಯಲ್ಲಿ ಜ್ಯೋತಿಷ್ಯ ವಿದ್ವಾನ್‌ ಅವರೊಂದಿಗಿನ ಸಂದರ್ಶನ ಪ್ರಸಾರವಾಗಲಿದೆ…

LEAVE A REPLY

Please enter your comment!
Please enter your name here