ಕೇಜ್ರಿವಾಲ್ ಕ್ಷಮೆಯಾಚಿಸಲಿ: ಶಾ

0
301

ನವದೆಹಲಿ ಪ್ರತಿನಿಧಿ ವರದಿ
ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಡಿಗ್ರಿ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಬಿಜೆಪಿ ಸುದ್ದಿಗೋಷ್ಠಿ ಏರ್ಪಡಿಸಿತ್ತು.
 
 
 
ಪ್ರಧಾನಿ ಪರವಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯ್ಲಲಿ ಶಾ ಅವರು ಪ್ರಧಾನಿ ಮೋದಿ ಅವರ ಡಿಗ್ರಿ ಸರ್ಟಿಫಿಕೆಟ್ ಪ್ರದರ್ಶನ ಮಾಡಿದ್ದಾರೆ. ಬಿಎ ಮತ್ತು ಎಂಎ ಸರ್ಟಿಫಿಕೆಟ್ ನ್ನು ಪ್ರದರ್ಶಿಸಿದ್ದಾರೆ.ಕೇಜ್ರಿವಾಲ್ ಅವರು ಮೋದಿ ವಿರುದ್ಧ ನಕಲಿ ಸರ್ಟಿಫಿಕೆಟ್ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ರಾಜಕಾರಣದ ಮೌಲ್ಯವನ್ನು ಹಾಳು ಮಾಡಿದ್ದಾರೆ. ಇದರಿಂದ ಕೇಜ್ರಿವಾಲ್ ದೇಶ ಕ್ಷಮೆಯಾಚಿಸಬೇಕು ಎಂದು ಶಾ ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
 
 
 
ಪ್ರಧಾನಿ ಮೋದಿ ದೆಹಲಿ ಯೂನಿವರ್ಸಿಟಿಯಲ್ಲಿ ಬಿಎ ಪದವಿ ಪಡೆದಿದ್ದು, ಗುಜರಾತ್ ನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ ಎ ಪದವಿ ಪಡೆದಿದ್ದಾರೆ ಎಂದು ಶಾ ಅವರು ಮಾಧ್ಯಮದ ಮುಂದೆ ವಿವರಿಸಿದ್ದಾರೆ.
 
 
 
ಮತ್ತೆ ಆಪ್ ಆರೋಪ
ಪ್ರಧಾನಿ ಮೋದಿ ಸರ್ಟಿಫಿಕೆಟ್ ಗಳು ನಕಲಿಯಾಗಿವೆ. ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವುದು ನಕಲಿ ಸರ್ಟಿಫಿಕೆಟ್ ಗಳಾಗಿವೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಷ್ ಆರೋಪಿಸಿದ್ದಾರೆ.
 
modi certificate0
 
ಮೋದಿಯ ಎರಡು ಪದವಿಗಳಲ್ಲಿ ಹೆಸರು ಬದಲಾಗಿದೆ. ಅಂಕಪಟ್ಟಿ, ಸರ್ಟಿಫಿಕೆಟ್ ಗಳಲ್ಲಿ ಇಸವಿಯೂ ಬದಲಾಗಿದೆ. ಆದ್ದರಿಂದ ಮೋದಿಯ ಸರ್ಟಿಫಿಕೆಟ್ ಗಳು ನಕಲಿಯಾಗಿವೆ.
 
 
ನಕಲಿ ಸರ್ಟಿಫಿಕೆಟ್ ಗಳ ಮೂಲಕ ಜನರನ್ನು ವಂಚಿಸಿದ್ದಾರೆ. ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಅವರು ಜನರನ್ನು ವಂಚಿಸಿದ್ದಾರೆ. ಕ್ಷಮೆ ಕೇಳಬೇಕಾದ್ದು ನಾವಲ್ಲ, ಬಿಜೆಪಿಯವರು ಕೇಳಬೇಕು. ದೇಶದ ಜನರನ್ನು ವಂಚಿಸಿದ್ದಕ್ಕೆ ಅವರು ಕ್ಷಮೆ ಕೇಳಬೇಕು ಎಂದು ಅಶುತೋಷ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here