ರಾಜ್ಯ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಹಾಸನ ಜಿಲ್ಲಾ ಘಟಕಕ್ಕೆ ಪದಾಧಿಕರಗಳ ನೇಮಕ

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಈಗಾಗಲೇ ರಾಜ್ಯದಾದ್ಯಂತ ತನ್ನ ಘಟಕಗಳನ್ನು ಪಸರಿಸುತ್ತಿರುವ ಸಂಸ್ಥೆ. ಹಾಸನದಲ್ಲಿ ಎಸ್.ಕೆ.ವಾಸು ಸಮುದ್ರವಳ್ಳಿಯವರ ನಾಯಕತ್ವದಲ್ಲಿ ಒಂದೂವರೆ ವರ್ಷದಿಂದಲೂ ರಸಪ್ರಶ್ನೆ, ಸಾಹಿತ್ಯಿಕ ಚರ್ಚೆಗಳನ್ನು ಮಾಡುತ್ತಾ ಜಿಲ್ಲೆಯಾದ್ಯಂತ ಈಗಾಗಲೇ ಗುರುತಿಸಿಕೊಂಡಿದ್ದು ಇಂದು ಮಹಾರಾಜ ಪಾರ್ಕಿನಲ್ಲಿ ಜಿಲ್ಲಾ ಘಟಕದ ರಚನೆಯ ಕುರಿತು ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಯನ್ನು ಅಧಿಕೃತವಾಗಿ ರೂಪಿಸಲಾಯಿತು. ಯುವ ಮನಸ್ಸುಗಳನ್ನು ಕೇಂದ್ರವಾಗಿಟ್ಟುಕೊಂಡ ಈ ಸಂಸ್ಥೆಯು ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಜಿಲ್ಲೆಯ ಎಂಟೂ ತಾಲ್ಲೂಕುಗಳಲ್ಲಿಯೂ ಘಟಕಗಳು ನೇಮಕಗೊಂಡಿದ್ದು, ಸದ್ಯದಲ್ಲಿಯೇ ಕಾರ್ಯತತ್ಪರವಾಗಲಿವೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ), ಹಾಸನ ಜಿಲ್ಲಾ ಘಟಕ ಈ ಕೆಳಗಿನಂತಿದೆ.

ಗೌರವ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕುಮಾರ್ ಛಲವಾದಿ, ಜಿಲ್ಲಾಧ್ಯಕ್ಷರಾಗಿ ಯುವ ಸಾಹಿತಿ ಎಸ್.ಕೆ.ವಾಸು ಸಮುದ್ರವಳ್ಳಿ, ಉಪಾಧ್ಯಕ್ಷರಾಗಿ ಕವಯಿತ್ರಿ ಹೇಮರಾಗ, ಎಚ್.ವೇದಶ್ರೀರಾಜ್, ಯುವ ಕವಿಗಳಾದ ಗಂಜಲಗೂಡು ಗೋಪಾಲೇಗೌಡ, ಎಂ.ಜಿ.ಪರಮೇಶ್ ಮಡಬಲು, ಜಿಲ್ಲಾ ಕೋಶಾಧ್ಯಕ್ಷರಾಗಿ ಕೆ.ವೈ.ಗೀತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದ್ಯಾವನೂರು ಮಂಜುನಾಥ, ಸಹ ಕಾರ್ಯದರ್ಶಿಗಳಾಗಿ ರಾಣಿ ಶಶಿಕಾಂತ್, ಎಚ್.ಡಿ.ಪ್ರದೀಪ್, ಸಂಘಟನಾ ಕಾರ್ಯದರ್ಶಿಗಳಾಗಿ ಮಾರುತಿ ಕೆ.ಬಿ.ದೊಡ್ಡಕೋಡಿಹಳ್ಳಿ, ರವಿ ಬಾಣಾವರ, ಮಹಿಳಾ ಕಾರ್ಯದರ್ಶಿಯಾಗಿ ಕೆ.ಸಿ.ಗೀತ ಹಾಗೂ ಜಿಲ್ಲಾ ಸಂಚಾಲಕರುಗಳಾಗಿ ನಿರಂಜನ್ ಎ.ಸಿ.ಬೇಲೂರು, ರಾಜೇಶ್ ಬಿ.ಹೊನ್ನೇನಹಳ್ಳಿ, ಶಿವಣ್ಣ ಕೆರಗೋಡಿ, ಉಮೇಶ್ ಬಿಸ್ಲೇಹಳ್ಳಿಯವರು ಆಯ್ಕೆಯಾಗಿದ್ದಾರೆ.

ವರದಿ : ದ್ಯಾವನೂರು ಮಂಜುನಾಥ್.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here