ಕೇಂದ್ರದ ವಿರುದ್ಧ ಸಿಎಂ ಆರೋಪ

0
514

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದ ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಮನೆ ಮೇಲೆ ಐಟಿ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕಾಂಗ್ರೆಸಿಗರ ನಿವಾಸ ಮೇಲೆ ಐಟಿ ದಾಳಿ ನಡೆಯುತ್ತಿರುವುದಕ್ಕೆ ಬಿಜೆಪಿ ಕುಮ್ಮಕ್ಕು ಕಾರಣ ಎಂದು ಸಿಎಂ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
 
 
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಈಗಾಗಲೇ ಹಲವು ಕಾಂಗ್ರೆಸ್ ಶಾಸಕರು ಐಟಿ ದಾಳಿಗೊಳಗಾಗಿದ್ದಾರೆ. ಇದಲ್ಲದೆ, ಇನ್ನೂ ಹಲವು ಶಾಸಕರ ಮನೆ ಮೇಲೆ ಐಟಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ. ಕಾಂಗ್ರೆಸ್ ಶಾಸಕರನ್ನು ಭ್ರಷ್ಟರು ಎಂದು ತೋರಿಸಿಕೊಡಲು ಈ ರೀತಿ ಯೋಜನೆ ರೂಪಿಸಿ ದಾಳಿ ನಡೆಸುತ್ತಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಸಿಎಂ ಆರೋಪ ಮಾಡಿದ್ದಾರೆ.
 
 
ಐಟಿ ದಾಳಿಗಳೆಲ್ಲಾ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ದಾಳಿಗಳು ನಡೆಯುತ್ತದೆ. ಬಿಜೆಪಿಯಲ್ಲಿ ತೆರಿಗೆ ಕಟ್ಟದಿರುವವರು ಇಲ್ವಾ? ಶ್ರೀಮಂತರು ಇಲ್ವಾ?, ಹಾಗಿದ್ರೂ ಬಿಜೆಪಿಯವರ ಮನೆಗಳ ಮೇಲೆ ಯಾಕೆ ದಾಳಿ ನಡೆಯೋಲ್ಲ? ಈ ರೀತಿಯ ಕೆಲಸಗಳನ್ನು ನಾನು ಖಂಡಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here