ಕೇಂದ್ರಕ್ಕೆ ಬಿಗ್ ರಿಲೀಫ್

0
402

ರಾಷ್ಟ್ರೀಯ ಪ್ರತಿನಿಧಿ ವರದಿ
ಹಣ ಡ್ರಾ ಮಿತಿ ಹೆಚ್ಚಳ ಮಾಡಲು ಸುಪ್ರೀಂಕೋರ್ಟ್ ನಕಾರ ಎಂದಿದೆ. 500, 1000ರೂ. ಮುಖಬೆಲೆಯ ನೋಟು ಬ್ಯಾನ್ ಕೇಸ್ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
 
 
ದೇಶದ ಎಲ್ಲಾ ಹೈಕೋರ್ಟ್ ಗಳಲ್ಲಿನ ವಿಚಾರಣೆಗೆ ತಡೆಯಾಜ್ಞೆ ಮಾಡಲಾಗಿದೆ. ಹಳೆ ನೋಟು ಬ್ಯಾನ್ ಸಂಬಂಧಿತ ವಿಚಾರಣೆಗೆ ಸುಪ್ರೀಂ ತಡೆ ನೀಡಿದೆ. ಈ ಕೇಸ್ ನ್ನು ಸುಪ್ರೀಂಕೋರ್ಟ್ ನ ಐವರು ಜಡ್ಜ್ ಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
 
 
 
ತ್ರಿಸದಸ್ಯ ಪೀಠ ಸಾಂವಿಧಾನಿಕ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ ಎಂದಿದೆ. ಅಲ್ಲದೆ ಸುಪ್ರೀಂ ಬ್ಯಾಂಕ್ ನಿಂದ ಹಣ ಡ್ರಾ ಮಿತಿ ಹೆಚ್ಚಳಕ್ಕೂ ನಕಾರ ಎಂದಿದೆ.
 
 
 
ಹಳೇ ನೋಟುಗಳ ಚಲಾವಣೆ ಅವಧಿ ವಿಸ್ತರಣೆಗೂ ಸುಪ್ರೀಂ ನಿರಾಕರಿಸಿದೆ. ಆಸ್ಪತ್ರೆ, ರೈಲ್ವೆ ಟಿಕೆಟ್ ಗೆ ಹಳೇ ನೋಟು ಚಲಾವಣೆಗೆ ನಕಾರ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.
 
 
 
ದೇಶದ ಎಲ್ಲಾ ಹೈಕೋರ್ಟ್ ಗಳಲ್ಲಿನ ವಿಚಾರಣೆಗೆ ಸುಪ್ರೀಂ ತಡೆ ನೀಡಿದೆ. ಸುಪ್ರೀಂನ ಸಾಂವಿಧಾನಿಕ ಪೀಠದಲ್ಲಿ ಮಾತ್ರ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಿಂದ ಮಹತ್ವದ ಆದೇಶ ಬಂದಿದೆ.

LEAVE A REPLY

Please enter your comment!
Please enter your name here