ರಾಜ್ಯ

ಕೆ.ವಿ ರಮಣ್ಗೆ ಮೈಸೂರಿನಲ್ಲಿ ಗುರುವಂದನೆ.

ರಂಗಭಾರತಿ ಮಂಗಳೂರು ಸಂಸ್ಥೆಯ ನಿರ್ದೇಶಕ ಕಲಾವಿದ- ಪತ್ರಕರ್ತ ಕೆ.ವಿ ರಮಣ್ ಮಂಗಳೂರು ಇವರಿಗೆ ಗುರುವಂದನಾ ಕಾರ್ಯಕ್ರಮವು ಡಿ.೨ರಂದು ಮೈಸೂರಿನ ಜಗನ್ಮೋಹನ ಪ್ಯಾಲೆಸ್ನಲ್ಲಿ ನಡೆಯಿತು.

ಶ್ರೀ ದುರ್ಗಾ ನೃತ್ಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ, ನಾಟ್ಯ ವಿದುಷಿ ವಿದ್ಯಾ ಶಶಿದರ್, ಕಾರ್ಯದರ್ಶಿ ಎಸ್.ಎಂ.ಶಶಿಧರ್ ಅವರು ಶ್ರೀ ದುರ್ಗಾ ಸಂಗೀತ ಪ್ರಶಸ್ತಿಯನ್ನ ನೀಡಿ ಕೆ.ವಿಮರಮಣ್ ಅವರಿಗೆ ಗುರುವಂದನೆ ಸಲ್ಲಿಸಿದರು.

ಟಿ.ಟಿ.ಡಿ ದಾಸ ಸಾಹಿತ್ಯ ಪ್ರೊಜೆಕ್ಶನ್ ದಕ್ಷಿಣ ಭಾರತ ವ್ಯವಸ್ಥಾಪಕಿ ಶಾಂತಿ ಸರ್ವೊತ್ತಮನ್ ಅಧ್ಯಕ್ಷತೆ ವಹಿಸಿದ್ದರು, ಟ್ರಸ್ಟ್ ಆಯೋಜಿಸಿದ್ದ ಶ್ರೀ ದುರ್ಗಾ ನೃತ್ಯೋತ್ಸವ -೨೦೧೮ನ್ನು ವೈಣಿಕ ರತ್ನ ಆರ್.ಕೆ ಪದ್ಮನಾಭ್ ಉದ್ಘಾಟಿಸಿದರು. ಡಾ| ಚೇತನಾ ರಾಧಾಕೃಷ್ಣ. ಪಿ‌.ಎಂ, ಲತಾ ಮೋಹನ್, ಸುಧಾ ಫಣೀಶ್ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳಾಗಿದ್ದ ಗುರು ಡಾ. ಶೀಲಾ ಶ್ರೀಧರ್ ಅವರಿಗೂ ಗುರು ವಂದನಾರ್ಪಣೆ ಸಲ್ಲಿಸಲಾಯಿತು.

ಇದೇ ಸಂಧರ್ಭದಲ್ಲಿ ವಿದ್ವಾನ್ ಎಂ.ಆರ್ ಹನುಮಂತರಾಜು (ಲಯವಾದ್ಯ), ಡಾ. ಕೆ ಎಸ್ ರಘುರಾಮಯ್ಯ ವಾಜಪೇಯಿ (ಸಮಾಜ ಸೇವೆ) ಅವರನ್ನ ಸನ್ಮಾನಿಸಲಾಯಿತು.

ಕೆ.ವಿ ರಮಣ್ ಅವರ ಹಾಡುಗಾರಿಕೆಯಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶ್ರೀ ದುರ್ಗಾ ನೃತ್ಯೋತ್ಸವ ನಡೆಸಿಕೊಟ್ಟರು. ಬಳಿಕ ಕೆ.ವಿ ರಮಣ್ ಪರಿಕಲ್ಪನೆ- ಸಾಹಿತ್ಯ – ಸಂಗೀತ- ಸಂಯೋಜನೆಯ “ದೇಶ – ಧರ್ಮ” ನೃತ್ಯ ರೂಪಕವನ್ನು ಶ್ರೀವಿದ್ಯಾ ಶಶಿಧರ್ ನೃತ್ಯ ಸಂಯೋಜನೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕಳೆದ ೮ ವರ್ಷಗಳಿಂದ ಮೈಸೂರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿರುವ ಶ್ರೀವಿದ್ಯಾ ಅವರು ಕಟೀಲು ಮೂಲದ ಅಜಾರು ರಾಜಾರಾಂ ರಾವ್ – ಮೀರಾ ದಂಪತಿಯ ಪುತ್ರಿ, ಕೆ.ವಿ ರಮಣ್ ಅವರ ಸಂಗೀತ ಶಿಷ್ಯೆ, ಅವರ ನಿರ್ದೆಶನದಲ್ಲಿ ದೇಶದಾದ್ಯಂತ ೨೫೦ಕ್ಕೂ ಹೆಚ್ಚು ಪ್ರದರ್ಶನ ಕಂಡ “ಬಭ್ರುವಾಹನ” ನೃತ್ಯ ನಾಟಕ ಕಲಾವಿದೆ, ಮನೆ ಮನೆಗೆ ಭರತನಾಟ್ಯ, ನಾಟ್ಯಾಯನ ಮುಂತಾದ ವಿನೂತನ ಪರಿಕಲ್ಪನೆಗಳ ಸಹಕಾರೀ ನಟುವಾಂಗ ಕಲಾವಿದೆ ಎನ್ನುವುದನ್ನ ಇಲ್ಲಿ ನೆನಪಿಸಬಹುದು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here