ಕೆ.ಎಸ್.ಟಿ.ಡಿ.ಸಿ. ಯಿಂದ ಕಡಲತೀರದ ಪ್ರವಾಸ

0
291

ನಮ್ಮ ಪ್ರತಿನಿಧಿ ವರದಿ
 ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ದಸರಾ ಹಾಗೂ ದೀಪಾವಳಿ ಪ್ರಯುಕ್ತ ಅಕ್ಟೋಬರ್ 2016 ರಿಂದ ಜನವರಿ 2017 ರವರೆಗೆ ಕಡಲ ತೀರದ ಪ್ರವಾಸ ಮತ್ತು ಪಾರಂಪರಿಕ ಪ್ರವಾಸಗಳನ್ನು ಏರ್ಪಡಿಸಲಾಗುತ್ತಿದ್ದು, ಕಡಲ ತೀರದ ಪ್ರವಾಸವಾದ ಗೋವಾ, ಗೋಕರ್ಣ ದರ ರೂ 5,600/- ಎಸಿ ವಾಹನದಲ್ಲಿ ಮತ್ತು ಪಾರಂಪರಿಕ ಪ್ರವಾಸವಾದ ಉತ್ತರ ಕರ್ನಾಟಕದ ಹಂಪೆ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ವಿಜಯಪುರ ಪ್ರವಾಸದ ದರ ರೂ 4,100/- ಎಸಿ ವಾಹನದಲ್ಲಿ ಪ್ರತಿ ಗುರುವಾರದಂದು ಹೊರಟು ಸೋಮವಾರದಂದು ಹಿಂದಿರುಗುವುದು. ಹಾಗೂ ಇದಲ್ಲದೆ ನಿಗಮದಿಂದ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದ್ದು ಹೆಚ್ಚಿನ ವಿವರವನ್ನು ನಮ್ಮ ನಿಗಮದ ವೆಬ್‍ಸೈಟ್ ಆದwww.karnatakaholidays.net ನಿಂದ ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here